ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲೋಬಲ್‌ ಹೆಲ್ತ್‌ ಅಂಡ್‌ ಸೋಷಿಯಲ್‌ ಮೆಡಿಸಿನ್‌ ಮುಖ್ಯಸ್ಥರಾಗಿ ವಿಕ್ರಂ ಪಟೇಲ್‌ ನೇಮಕ

Published 5 ಜೂನ್ 2023, 14:20 IST
Last Updated 5 ಜೂನ್ 2023, 14:20 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ಗ್ಲೋಬಲ್‌ ಹೆಲ್ತ್‌ ಅಂಡ್‌ ಸೋಷಿಯಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಸಂಜಾತ ಖ್ಯಾತ ಸಂಶೋಧಕ ಹಾಗೂ ಮಾನಸಿಕ ಆರೋಗ್ಯ ತಜ್ಞ ವಿಕ್ರಂ ಪಟೇಲ್‌ ಅವರು ನೇಮಕವಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ಮುಂಬೈನಲ್ಲಿ ಜನಿಸಿದ ಪಟೇಲ್‌ ಅವರು ಪ್ರಸ್ತುತ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ಬ್ಲಾವಾಟ್ನಿಕ್‌ ಇನ್‌ಸ್ಟಿಟ್ಯೂಟ್‌ನ ಗ್ಲೋಬಲ್‌ ಹೆಲ್ತ್‌ ವಿಭಾಗದ ಪರ್ಶಿಂಗ್‌ ಸ್ಕ್ವೇರ್‌ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್‌ 1ರಂದು ಪಟೇಲ್‌ ಅವರು ತಮ್ಮ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಪ್ರಕಟಣೆ ತಿಳಿಸಿದೆ.‌

‘ಜೀವನದುದ್ದಕ್ಕೂ ಇರುವಂಥ ಮಾನಸಿಕ ಸಮಸ್ಯೆಗಳ ಹೊರೆ, ಸಾಮಾಜಿಕ ಅನನುಕೂಲಗಳೊಂದಿಗೆ ಇರುವ ಸಮಸ್ಯೆಗಳ ನಂಟು ಹಾಗೂ ಈ ಸಮಸ್ಯೆಗಳನ್ನು ತಡೆಗಟ್ಟುವಿಕೆಗೆ ಸಮುದಾಯದ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಪಟೇಲ್‌ ಅವರ ಸಂಶೋಧನೆಗಳು ಬೆಳಕು ಚೆಲ್ಲಿವೆ. 2022ರವರೆಗೆ ವಿಭಾಗದ ಮುಖ್ಯಸ್ಥರಾಗಿದ್ದ ಪಾಲ್‌ ಅವರ ಉತ್ತರಾಧಿಕಾರಿಯಾಗಲಿದ್ದಾರೆ, ಪಟೇಲ್‌ ಈ ಸ್ಥಾನಕ್ಕೆ ಅರ್ಹರು’ ಎಂದು ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ಮುಖ್ಯಸ್ಥ (ಎಚ್‌ಎಂಎಸ್‌) ಜಾರ್ಜ್‌ ಕ್ಯೂ. ದಾಲೇ ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಟೇಲ್‌ ಅವರು, ‘ಗ್ಲೋಬಲ್‌ ಹೆಲ್ತ್‌ ಅಂಡ್‌ ಸೋಷಿಯಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥನಾಗಿ ಗೌರವಯುತವಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT