ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದಿಂದ ಯುದ್ಧ ಸ್ಮಾರಕ ನಿರ್ಮಾಣ’

Last Updated 19 ಜೂನ್ 2018, 19:01 IST
ಅಕ್ಷರ ಗಾತ್ರ

ಪ್ಯಾರಿಸ್‌:‘ಫ್ರಾನ್ಸ್‌ನ ಸ್ವಾತಂತ್ರಕ್ಕಾಗಿ ನಡೆದ ಮೊದಲ ಮಹಾಯುದ್ಧದಲ್ಲಿ ಅವಿಭಜಿತ ಭಾರತದ ಸೈನಿಕರ ಕೊಡುಗೆ ಸ್ಮರಣಾರ್ಥ ಇಲ್ಲಿನ ವಿಲ್ಲರ್ಸ್‌ಗ್ಯುಸ್ಲೆನ್‌ನಲ್ಲಿ ಯುದ್ಧ ಸ್ಮಾರಕ ನಿರ್ಮಿಸಲಾಗುವುದು’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಘೋಷಿಸಿದ್ದಾರೆ.

ಈ ಪಟ್ಟಣವು ಪ್ಯಾರಿಸ್‌ನಿಂದ 200 ಕಿ.ಮೀ ದೂರದಲ್ಲಿದೆ. ಈ ಸ್ಮಾರಕ ನಿರ್ಮಾಣಗೊಂಡರೆ, ಯುರೋಪ್‌ನಲ್ಲಿ ನಿರ್ಮಾಣವಾಗಲಿರುವ ಎರಡನೇ ಯುದ್ಧ ಸ್ಮಾರಕವಾಗಲಿದೆ.

ಅಭಿವೃದ್ಧಿ ಸಹಭಾಗಿತ್ವ:‘ಮೂಲಸೌಕರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಶುದ್ಧ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲುಭಾರತ ಹಾಗೂ ಫ್ರಾನ್ಸ್‌ ಹೆಚ್ಚು ಒತ್ತು ನೀಡ‌ಬೇಕು’ ಎಂದು ಸುಷ್ಮಾ ಕರೆ ನೀಡಿದ್ದಾರೆ.

ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಅವರು ರೋಮ್‌ ಪ್ರವಾಸ ಮುಗಿಸಿ ಮಂಗಳವಾರ ಇಲ್ಲಿಗೆ ಬಂದಿಳಿದರು.

‘ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಫ್ರಾನ್ಸ್‌ ವಿದೇಶಾಂಗ ಸಚಿವ ಜೀನ್‌–ಯೂಸ್‌ ಲೀ ಡ್ರಿಯನ್‌ ಜೊತೆಗೆ ಸುಷ್ಮಾ ಸ್ವರಾಜ್‌ ಅವರು ಮಾತುಕತೆ ನಡೆಸಲಿದ್ದಾರೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

‘ಎರಡು ರಾಷ್ಟ್ರಗಳ ಜೊತೆಗೆ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಹಂಚಿಕೆ ವಿಚಾರದಲ್ಲಿ ನಿರೀಕ್ಷೆಗೂ ಮೀರಿ ಬೆಳವಣಿಗೆಯಾಗಿದೆ. ಕಳೆದ ವರ್ಷ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ವಹಿವಾಟು ₹ 74 ಸಾವಿರ ಕೋಟಿ ದಾಟಿದೆ. 2022ರ ವೇಳೆಗೆ ₹1 ಲಕ್ಷ ಕೋಟಿ ಗುರಿಯನ್ನು ಹೊಂದಲಾಗಿದೆ ಎಂದು ಸ್ವರಾಜ್‌ ಅವರು ತಿಳಿಸಿದರು’ ಎಂದರು.

‘ಸ್ಮಾರ್ಟ್‌ಸಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಶುದ್ಧ ಇಂಧನ, ಸಾರಿಗೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಬಲ ಬಾಂಧವ್ಯದ ಅಗತ್ಯವಿದೆ. ಭಾರತಕ್ಕೆ ಭೇಟಿ ನೀಡಿದ್ದಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಜೊತೆ ಚರ್ಚೆ ನಡೆಸಿದ ವಿಚಾರಗಳ ಕುರಿತಂತೆ ಮತ್ತೆ ಮಾತುಕತೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT