ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೆ: ಕುಸಿದುಬಿದ್ದು ಭಾರತ ಮೂಲದ ಕಾರ್ಮಿಕ ಸಾವು

ಮಾಲ್ದೀವ್ಸ್‌ ರಾಜಧಾನಿ ಮಾಲೆಯಲ್ಲಿ ಪ್ರಮುಖ ಸೇತುವೆಯೊಂದರ ನಿರ್ಮಾಣ ಚಟುವಟಿಕೆ
Published 18 ಜೂನ್ 2024, 16:28 IST
Last Updated 18 ಜೂನ್ 2024, 16:28 IST
ಅಕ್ಷರ ಗಾತ್ರ

ಮಾಲೆ: ಮಾಲ್ದೀವ್ಸ್‌ ರಾಜಧಾನಿ ಮಾಲೆಯಲ್ಲಿ ಪ್ರಮುಖ ಸೇತುವೆಯೊಂದರ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದ್ದ ಭಾರತ ಮೂಲದ ಕಾರ್ಮಿಕನೊಬ್ಬ ಸೋಮವಾರ ರಾತ್ರಿ, ಕೆಲಸದ ಅವಧಿಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಪೊಲೀಸರು ಮೃತನ ಗುರುತು ಬಹಿರಂಗಪಡಿಸಿಲ್ಲ. ಇತ್ತೀಚೆಗೆ ವರದಿಯಾದ ಎರಡನೇ ಪ್ರಕರಣ ಇದಾಗಿದೆ. ಸುದ್ದಿ ವೆಬ್‌ ಪೋರ್ಟಲ್‌ವೊಂದರ ಪ್ರಕಾರ, ಸೋಮವಾರ ರಾತ್ರಿ ಸಿನಮಲೆ ಸೇತುವೆ ನಿರ್ಮಾಣ ಸ್ಥಳದ ಬಳಿ ಘಟನೆ ನಡೆದಿದೆ. ಕಾರ್ಮಿಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT