ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ–ಭಾರತ ಒಗ್ಗೂಡಿದರೆ ಚೀನಾಗೆ ಪ್ರಬಲ ಸಂದೇಶ: ಮೈಖೇಲ್ ಮೆಕಾಲ್

Published 21 ಜೂನ್ 2024, 15:29 IST
Last Updated 21 ಜೂನ್ 2024, 15:29 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕಾರ್ಯತಂತ್ರ ಹಿತಾಸಕ್ತಿ ದೃಷ್ಟಿಯಿಂದ ಭಾರತ ಮತ್ತು ಅಮೆರಿಕ ಒಗ್ಗೂಡಿ ಕೆಲಸ ಮಾಡಿದರೆ, ಚೀನಾಗೆ ಪ್ರಬಲ ಸಂದೇಶ ರವಾನಿಸಬಹುದಾಗಿದೆ ಎಂದು ಅಮೆರಿಕದ ಜನಪ್ರತಿನಿಧಿ ಹೇಳಿದ್ದಾರೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನವನ್ನು ಉತ್ಪಾದಿಸಲು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡುವುದು ಅಗತ್ಯ ಎಂದು ಅಮೆರಿಕದ ಸಂಸದ ಮೈಖೇಲ್ ಮೆಕಾಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಹೀಗೆ ಒಗ್ಗೂಡಿ ಕಾರ್ಯತತ್ಪರವಾದರೆ ಚೀನಾಗೆ ಪ್ರಬಲ ಸಂದೇಶವನ್ನು ಕಳುಹಿಸಬಹುದು ಎಂದೂ ಅವರು ಸಭೆಯಲ್ಲಿ ತಿಳಿಸಿದ್ದಾಗಿ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. 

ಟೆಕ್ಸಾಸ್‌ನಲ್ಲಿ ಭಾರತದ ಮೂಲದವರು ಸಾಕಷ್ಟು ಜನರಿದ್ದಾರೆ. ಅಲ್ಲಿಗೆ ಭೇಟಿ ನೀಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾಗಿಯೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT