ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್‌ ಅಧ್ಯಕ್ಷರೊಂದಿಗೆ ಜೈಶಂಕರ್‌ ಚರ್ಚೆ

Last Updated 27 ಮಾರ್ಚ್ 2022, 14:17 IST
ಅಕ್ಷರ ಗಾತ್ರ

ಮಾಲೆ(ಪಿಟಿಐ): ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರು ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್‌ ಅವರೊಂದಿಗೆ ಭಾನುವಾರ ಉಭಯ ರಾಷ್ಟ್ರಗಳ ನಡುವಿನ ವಿಶೇಷ ಸಹಭಾಗಿತ್ವ ಕುರಿತು ಚರ್ಚೆ ನಡೆಸಿದರು.

ಮಾಲ್ಡೀವ್ಸ್‌ಗೆ ಶನಿವಾರ ಆಗಮಿಸಿದ್ದ ಜೈಶಂಕರ್‌ ಅವರನ್ನು ಸೋಲಿಹ್‌ ಅವರು ಬರ ಮಾಡಿಕೊಂಡರು.
ಎರಡೂ ದೇಶಗಳು ನಡುವಿನ ವಿಶೇಷ ಪಾಲುದಾರಿಕೆ ಕುರಿತು ಚರ್ಚಿಸಲಾಯಿತು. ಇದು ಮುಂದಿನ ದಿನಗಳಲ್ಲಿ ಮಹತ್ವದ ಫಲಿತಾಂಶಗಳನ್ನು ನೀಡಲಿದೆ. ಸೋಲಿಹ್‌ ಅವರೊಂದಿಗೆ ಚರ್ಚೆ ಫಲಪ‍್ರದವಾಗಿದೆ ಎಂದು ಜೈಶಂಕರ್‌ ಹೇಳಿದ್ದಾರೆ.

ರಾಷ್ಟ್ರೀಯ ಪೊಲೀಸ್‌ ಮತ್ತು ಕಾನೂನು ಜಾರಿ ಕಾಲೇಜು(ಎನ್‌ಸಿಪಿಎಲ್‌ಇ) ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷರೊಂದಿಗೆ ಭಾಗವಹಿಸಲು ಅವಕಾಶ ದೊರೆತಿರುವುದು ಖುಷಿ ತಂದಿದೆ. ದೇಶದಲ್ಲಿ ಕಾನೂನು ಜಾರಿಗೆ ಭಾರತವು ಬೆಂಬಲ ನೀಡಲಿದೆ. ಎನ್‌ಸಿಪಿಎಲ್‌ಇ ಅಪರಾಧಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಮಾಲ್ಡೀವ್ಸ್‌ ಪೊಲೀಸ್‌ಗೆ ನೆರವಾಗಲಿದೆ ಎಂದು ಜೈಶಂಕರ್‌ ಮತ್ತು ಮಾಲ್ಡೀವ್ಸ್‌ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್‌ ಶಾಹಿದ್ ಅವರ ಜಂಟಿ ಹೇಳಿಕೆ ತಿಳಿಸಿದೆ.

ಇದೇ ವೇಳೆ ಅಡ್ಡು ನಗರದ ಪುನಶ್ಚೇತನ, ರಸ್ತೆ ನಿರ್ಮಾಣ, ಸಮುದ್ರ ತೀರ ರಕ್ಷಣೆಯ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಾಲ್ಡೀವ್ಸ್‌ ಕರಾವಳಿಯ ಭದ್ರತೆಗಾಗಿ ರಾಡರ್ ವ್ಯವಸ್ಥೆಯನ್ನು ಹಸ್ತಾಂತರ ಮಾಡಲಾಯಿತು. ದ್ವಿಪಕ್ಷೀಯ ಸಹಭಾಗಿತ್ವ ಹಾಗೂ ಎರಡೂ ದೇಶಗಳ ಪ್ರಾದೇಶಿಕ ಭದ್ರತೆ ಮತ್ತು ಜಲಗಡಿ ಸುರಕ್ಷತೆ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

ಉಭಯ ದೇಶಗಳ ಹೊಸ ಪರಿಸರ ಪ್ರವಾಸೋದ್ಯಮ ವಲಯವು ಪರಿಸರ ಸಂರಕ್ಷಣೆ ಕುರಿತು ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಜೈಶಂಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT