ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಉದ್ಯಮಿಯಿಂದ ಚಂದ್ರಯಾನ

Last Updated 18 ಸೆಪ್ಟೆಂಬರ್ 2018, 18:13 IST
ಅಕ್ಷರ ಗಾತ್ರ

ಹಾಥೊರ್ನ್ (ಎಎಫ್‌ಪಿ):ಜಪಾನ್‌ನ ಕೋಟ್ಯಧಿಪತಿ ‌ಉದ್ಯಮಿ ಯುಸಾಕು ಮೆಯೆಜಾವಾ (42) ಅವರು ಬೃಹತ್ ಸ್ಪೇಸ್‌ಎಕ್ಸ್ ರಾಕೆಟ್‌ ನಲ್ಲಿಚಂದ್ರಯಾನ ಕೈಗೊಳ್ಳುವ ಮೊದಲ ವ್ಯಕ್ತಿ ಆಗಲಿದ್ದಾರೆ.

ಮೆಯೆಜಾವಾ ಅವರು ಜಪಾನ್‌ನ ಅತಿದೊಡ್ಡ ಆನ್‌ಲೈನ್‌ ಫ್ಯಾಷನ್ ಮಾಲ್ ‘ಸ್ಟಾರ್ಟ್‌ ಟುಡೆ ಕೊ’ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಆಗಿದ್ದು,₹21,868 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

‘ಮೆಯೆಜಾವಾ ಸಾಹಸಶಾಲಿ. ಅವರು ಚಂದ್ರನಲ್ಲಿಗೆ ಪ್ರವಾಸ ಕೈಗೊಳ್ಳಲು ನಮ್ಮನ್ನು ಆಯ್ಕೆ ಮಾಡಿ ಕೊಂಡಿದ್ದು ನಮಗೆ ಗೌರವ ತಂದಿದೆ’ ಎಂದು ಸ್ಪೇಸ್‌ಎಕ್ಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಲಾನ್‌ ಮಸ್ಕ್ ಹೇಳಿದ್ದಾರೆ.

ತಮ್ಮೊಂದಿಗೆ ಪ್ರವಾಸ ಕೈಗೊ ಳ್ಳಲು ವಿಶ್ವದ ಆರರಿಂದ ಎಂಟು ಕಲಾವಿದರನ್ನು ಆಹ್ವಾನಿಸುತ್ತಿರುವುದಾಗಿಮೆಯೆಜಾವಾ ಹೇಳಿದ್ದಾರೆ.

‘2023ರಲ್ಲಿ ಕೈಗೊಳ್ಳುವ ಈ ಪ್ರವಾಸಕ್ಕೆ ಮೆಯೆಜಾವಾ ನೀಡಿರುವ ಮೊತ್ತ ಬಹಿರಂಗಗೊಳಿಸುವುದಿಲ್ಲ. ಆದರೆ ಕಲಾವಿದರಿಗೆ ಪ್ರವಾಸ ಉಚಿತ’ ಎಂದು ಮಸ್ಕ್ ಹೇಳಿದ್ದಾರೆ.‌

‘ಬಾಲ್ಯದಿಂದಲೂ ಚಂದ್ರ ಎಂದರೆ ನನಗೆ ಪ್ರೀತಿ. ಇದು ನನ್ನ ಜೀವಮಾನದ ಕನಸು’ ಎಂದು ಸ್ಪೇಸ್‌ಎಕ್ಸ್ ಕೇಂದ್ರ ಕಚೇರಿ
ಯಲ್ಲಿ ಮಾತನಾಡಿದ ವೇಳೆ ಮೆಯೆಜಾವಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT