ಲಾಸ್ ಏಂಜಲೀಸ್: ನಟ, ನಿರ್ದೇಶಕ ಕಮಲ್ ಹಾಸನ್, ಬಾಲಿವುಡ್ ನಟ ಆಯುಷ್ಮಾನ್ ಖುರಾನ, ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಚಿತ್ರದ ನಿರ್ದೇಶಕಿ ಪಾಯಲ್ ಕಪಾಡಿಯಾ ಸೇರಿದಂತೆ ಹಲವು ಭಾರತೀಯ ನಟರು ಹಾಗೂ ಸಿನಿಮಾ ತಂತ್ರಜ್ಞರನ್ನು ಲಾಸ್ ಏಂಜಲೀಸ್ನ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್’ನ ಸದಸ್ಯರಾಗಲು ಆಹ್ವಾನಿಸಲಾಗಿದೆ.

ಆಸ್ಕರ್ ಪ್ರಶಸ್ತಿ ಆಯ್ಕೆಯಲ್ಲಿ ಈ ಸದಸ್ಯರು ಮುಖ್ಯಭೂಮಿಕೆ ವಹಿಸಲಿದ್ದಾರೆ. ಪ್ರಶಸ್ತಿ ವಿಜೇತರ ಆಯ್ಕೆಗೆ ಈ ಸದಸ್ಯರು ಮತಚಲಾಯಿಸಲಿದ್ದಾರೆ.

‘ಗಲ್ಲಿ ಬಾಯ್’ ಚಿತ್ರದ ಕಾಸ್ಟಿಂಗ್ ನಿರ್ದೇಶಕ ಕರಣ್ ಮಾಲಿ, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಚಿತ್ರದ ಛಾಯಾಗ್ರಾಹಕ ರಣಬೀರ್ ದಾಸ್, ಈ ಚಿತ್ರದ ವಸ್ತ್ರ ವಿನ್ಯಾಸಕಿ ಮೈಕ್ಸಿಮಾ ಬಸೂ ಅವರನ್ನೂ ಆಹ್ವಾನ ಮಾಡಲಾಗಿದೆ. ಒಂದು ವರ್ಷ ಅವಧಿಗೆ ಸದಸ್ಯತ್ವ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.