ಆನ್‌ಲೈನ್ ವರ್ಚ್ಯುಯಲ್ ಗ್ಯಾಲರಿ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಲಾವಿದರ ಕಲಾಪ್ರದರ್ಶನವಾಗುತ್ತಿದೆ. ಮುಂದಿನ 20 ವರ್ಷವನ್ನು ದೃಷ್ಟಿಯಲ್ಲಿಟ್ಟುಕೊಂಡು ‘ನಮ್ಮ ಕಲಾ ಉತ್ಸವ’ವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲಾಗುತ್ತಿದೆ
ಬಿ.ಎಲ್. ಶಂಕರ್, ಚಿತ್ರಕಲಾ ಪರಿಷತ್
ನಮ್ಮ ಯುವ ಕಲಾವಿದರತ್ತ ಹೆಚ್ಚು ಗಮನ ಕೇಂದ್ರೀಕೃತವಾಗಬೇಕು. ನಮ್ಮಲ್ಲಿ ಸಮೃದ್ಧಿ ಕಲಾ ಮಾದರಿಗಳಿವೆ. ಮೂಲಸೌಕರ್ಯವೂ ಉತ್ತಮಗೊಳ್ಳುತ್ತಿದೆ. ಚರ್ಚ್ ಸ್ಟ್ರೀಟ್‌ನಂತೆ, ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿ ರಸ್ತೆಯಲ್ಲೂ ಕಲಾ ಪ್ರದರ್ಶನವಾಗಬೇಕು. ಕ್ರಿಯಾಶೀಲ ನಾಗರಿಕರು ಸರ್ಕಾರದಿಂದ ಕೆಲಸ ತೆಗೆದುಕೊಳ್ಳುತ್ತಾರೆ
ಉಮಾ ಮಹದೇವನ್, ಅಭಿವೃದ್ಧಿ ಆಯುಕ್ತೆ
ನಗರ ಸಾಂಸ್ಕೃತಿಕ ತಾಣವಾಗಲು, ನಾಗರಿಕರಲ್ಲಿ ಹವ್ಯಾಸವನ್ನು ಸೃಷ್ಟಿಸಬೇಕು. ಸುಗಮವಾಗಿ ತಲುಪಬಹುದಾದ ಪ್ರದರ್ಶನ ತಾಣಗಳು ನಿರ್ಮಾಣವಾಗಬೇಕು. ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಲಾ ಪ್ರದರ್ಶನವಾಗಬೇಕು
ಅಭಿಷೇಕ್ ಪೊದ್ದಾರ್,ಸಂಸ್ಥಾಪಕ, ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೊಗ್ರಫಿ