ವಾಷಿಂಗ್ಟನ್: ವಾರ್ಷಿಕ ₹ 2.98 ಕೋಟಿಗಿಂತ (4 ಲಕ್ಷ ಡಾಲರ್) ಕಡಿಮೆ ಆದಾಯ ಇರುವ ಅಮೆರಿಕದ ಪ್ರಜೆಗಳಿಗೆ ತೆರಿಗೆಯಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ ಎಂದು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭರವಸೆ ನೀಡಿದ್ದಾರೆ.
ಜೋಬೈಡನ್ ಅವರ ಆಡಳಿತದ ಅವಧಿಯಲ್ಲಿ ಕಾರ್ಪೊರೇಟ್ ಸಂಸ್ಥೆಯವರು ಮತ್ತು ಸಿರಿವಂತರು ತಮ್ಮ ಪಾಲನ್ನು ಸರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಕಮಲಾ ಅವರು ಟ್ವೀಟ್ ಮಾಡಿದ್ದಾರೆ.