ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ ಮೇಲೆ ಪಾಕ್‌ ಪ್ರತಿ ದಾಳಿ, 9 ಸಾವು

ಇರಾನ್‌ ವ್ಯಾಪ್ತಿಯ ಪ್ರಾಂತ್ಯದಲ್ಲಿ ಡ್ರೋನ್, ರಾಕೆಟ್‌ ದಾಳಿ
Published 18 ಜನವರಿ 2024, 15:35 IST
Last Updated 18 ಜನವರಿ 2024, 15:35 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ : ಇರಾನ್‌ನ ಗಡಿಯೊಳಗೆ ಎರಡು ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿ ಪಾಕ್‌ ಸೇನೆ ಗುರುವಾರ ವಾಯುದಾಳಿ ನಡೆಸಿದೆ. ಡ್ರೋನ್‌ಗಳು ಹಾಗೂ ರಾಕೆಟ್‌ಗಳನ್ನು ಬಳಸಿ ಪರಿಣಾಮಕಾರಿ ದಾಳಿ ನಡೆಸಲಾಗಿದೆ ಎಂದೂ ಪಾಕಿಸ್ತಾನ ತಿಳಿಸಿದೆ.  

ಗುಪ್ತದಳದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ (ಬಿಎಲ್ಎ), ಬಲೂಚಿಸ್ತಾನ್‌ ಲಿಬರೇಷನ್‌ ಫ್ರಂಟ್‌ (ಬಿಎಲ್ಎಫ್‌) ಸಂಘಟನೆಗಳ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, ಒಂಬತ್ತು ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆಯು ತಿಳಿಸಿದೆ. 

ಈ ಮಧ್ಯೆ, ಇರಾನ್‌ನ ಅಧಿಕೃತ ಸುದ್ದಿಸಂಸ್ಥೆ ‘ಇರ್ನಾ’, ‘ದೇಶದ ಸರವನ್‌ ಪ್ರದೇಶದ ಗ್ರಾಮವೊಂದನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. ‘ಮೃತಪಟ್ಟ ಎಲ್ಲರೂ ವಿದೇಶಿ ಪ್ರಜೆಗಳಾಗಿದ್ದಾರೆ’ ಎಂದು ಇರಾನ್‌ ಸಚಿವ ಅಹ್ಮದ್‌ ವಾಹಿದಿ ಅವರು ಪ್ರತಿಕ್ರಿಯಿಸಿದ್ದಾರೆ.

ದಾಳಿ ಕುರಿತಂತೆ ಪಾಕ್‌ ಸೇನೆಯ ಮಾಧ್ಯಮ ವಿಭಾಗ ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿ ನಡೆಸಿದ್ದ ನೆಲೆಗಳು ಉಗ್ರರಾದ ದೋಸ್ತಾ ಅಲಿಯಾಸ್ ಚೇರ್‌ಮನ್, ಬಜ್ಜರ್ ಅಲಿಯಾಸ್‌ ಸೋಘಟ್, ಸಾಹಿಲ್ ಅಲಿಯಾಸ್ ಶಫಾಕ್, ಅಸ್ಗರ್‌ ಅಲಿಯಾಸ್‌ ಬಾಷಂ ಮತ್ತು ವಾಜಿರ್‌ ಅಲಿಯಾಸ್‌ ವಾಜಿ ಅವರ ಅಡಗುದಾಣಗಳಾಗಿದ್ದವು ಎಂದು ತಿಳಿಸಿದೆ.

ಬುಧವಾರ ಇರಾನ್‌ ಸೇನೆಯು ನಡೆಸಿದ ದಾಳಿ ಹಿಂದೆಯೇ, ಪ್ರತಿಭಟನೆ ಕ್ರಮವಾಗಿ ಇರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸು ಕರೆಯಿಸಿಕೊಂಡಿದ್ದ ಪಾಕಿಸ್ತಾನ ಸರ್ಕಾರ, ಇರಾನ್ ಜೊತೆಗೆ ಪೂರ್ವನಿಗದಿಯಾಗಿದ್ದ ಉನ್ನತ ಮಟ್ಟದ ಎಲ್ಲ ದ್ವಿಪಕ್ಷೀಯ ಭೇಟಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT