ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್–ಹಮಾಸ್ ಯುದ್ಧಕ್ಕೆ ಮುಂದಿನ ಸೋಮವಾರ ವಿರಾಮ: ಬೈಡನ್ ವಿಶ್ವಾಸ

Published 27 ಫೆಬ್ರುವರಿ 2024, 2:32 IST
Last Updated 27 ಫೆಬ್ರುವರಿ 2024, 2:32 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಮುಂದಿನ ಸೋಮವಾರ ಕದನ ವಿರಾಮ ಬೀಳುವ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ನಾವು ಯುದ್ಧ ವಿರಾಮದ ವಾತಾವರಣಕ್ಕೆ ಹತ್ತಿರವಾಗಿದ್ದೇವೆ. ಆದರೆ, ಅದು ಇನ್ನೂ ಆಗಿಲ್ಲ ಎಂದೂ ಅವರು ಹೇಳಿದ್ದಾರೆ.

‘ನಾವು ಯುದ್ಧ ವಿರಾಮಕ್ಕೆ ಹತ್ತಿರವಾಗಿದ್ದೇವೆ ಎಂದು ನನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರರು ನನಗೆ ಹೇಳಿದ್ದಾರೆ. ಮುಂದಿನ ಸೋಮವಾರದ ವೇಳೆಗೆ ನಾವು ಕದನ ವಿರಾಮವನ್ನು ಹೊಂದುತ್ತೇವೆ ಎಂಬುದು ನನಗಿರುವ ಭರವಸೆ’ ಎಂದು ಬೈಡನ್ ಹೇಳಿದ್ದಾರೆ.

ಒತ್ತೆಯಾಳು ಒಪ್ಪಂದದ ಮಾತುಕತೆಯಲ್ಲಿ ತಾನು ಇಟ್ಟಿದ್ದ ಕೆಲವು ಪ್ರಮುಖ ಬೇಡಿಕೆಗಳನ್ನು ಹಮಾಸ್ ಹಿಂತೆಗೆದುಕೊಂಡಿದೆ. ಇದು ಯುದ್ಧ ವಿರಾಮದ ವಾತಾವರಣವನ್ನು ಉತ್ತಮಗೊಳಿಸಿತು.

ಪ್ಯಾರಿಸ್‌ನಲ್ಲಿ ಅಮೆರಿಕ, ಈಜಿಪ್ಟ್ ಮತ್ತು ಇಸ್ರೇಲಿ ಗುಪ್ತಚರ ಮುಖ್ಯಸ್ಥರು ಮತ್ತು ಕತಾರ್‌ ಪ್ರಧಾನ ಮಂತ್ರಿಗಳ ನಡುವೆ ನಡೆದ ಸಭೆಯ ನಂತರ ಮಾತನಾಡಿದ ಬೈಡನ್ ಆಡಳಿತದ ಅಧಿಕಾರಿಯೊಬ್ಬರು, ಇಸ್ರೇಲಿ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡು ಯುದ್ಧ ಅಂತ್ಯಗೊಳಿಸಬೇಕೆಂಬ ಹಮಾಸ್‌ನ ಪ್ರಮುಖ ಬೇಡಿಕೆಗಿದ್ದ ಅಡೆತಡೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.

‘ಇಸ್ರೇಲ್ ಒತ್ತೆಯಾಳುಗಳಾಗಿರುವ ಕೆಲವು ಪ್ಯಾಲೆಸ್ಟೀನಿಯರನ್ನು ಬಿಡುಗಡೆ ಮಾಡಬೇಕೆಂಬ ಹಮಾಸ್ ಬೇಡಿಕೆ ತಿರಸ್ಕರಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT