ವೆಲ್ಲಿಂಗ್ಟನ್: ಗಗನಕ್ಕೇರುತ್ತಿರುವ ವಸತಿ ಬೆಲೆಗಳಿಗೆ ಕಡಿವಾಣ ಹಾಕುವ ಸಲುವಾಗಿ ವಿದೇಶಿಯರು ಮನೆ ಖರೀದಿಸುವುದನ್ನು ನ್ಯೂಜಿಲೆಂಡ್ ಸರ್ಕಾರ ನಿಷೇಧಿಸಿದೆ.
ಸ್ಥಳೀಯರಿಗೆ ಕೈಗೆಟುಕುವ ದರದಲ್ಲಿ ಮನೆ ಒದಗಿಸುವ ಜೊತೆಗೆ ಸ್ಥಳೀಯರಿಗೆ ವಸತಿ ಮಾಲೀಕತ್ವದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕೈಗೊಂಡಿದೆ.
ಇದಕ್ಕಾಗಿ ಸರ್ಕಾರ ಕಾನೂನು ರೂಪಿಸಿದೆ. ಈ ಹಿಂದೆ ವಸತಿ ಮಾರುಕಟ್ಟೆ ವಿಶ್ವದಾದ್ಯಂತ ಹೂಡಿಕೆದಾರರಿಗೆ ಮುಕ್ತವಾಗಿತ್ತು.ಈ ಹೊಸ ಕಾನೂನು ಸರ್ಕಾರದ ಚುನಾವಣಾ ಘೋಷಣೆಗಳಲ್ಲೊಂದು. ಈಗಾಗಲೇ ವಸತಿ ಹೊಂದಿರುವವರಿಗೆ ಈ ಕಾನೂನಿನಿಂದ ಯಾವುದೇ ಪರಿಣಾಮ ಆಗುವುದಿಲ್ಲ.