ಶಬ್ದಾತೀತ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು, ಇದು ದೇಶದ ಪರಮಾಣು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಉತ್ತರ ಕೊರಿಯಾ ತಿಳಿಸಿದೆ.ಕ್ಷಿಪಣಿ ಉಡಾವಣೆ ಕುರಿತ ಛಾಯಾಚಿತ್ರಗಳನ್ನು ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ. ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಸಣ್ಣ ಕೊಠಡಿಯೊಂದರಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಕುಳಿತು ಕ್ಷಿಪಣಿ ಪರೀಕ್ಷೆಯನ್ನು ವೀಕ್ಷಿಸಿದರು ಎಂದು ವರದಿಯಾಗಿದೆ.