ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಗೆ ಪ್ರಚಾರ ಆರಂಭಿಸಿದ ಬಿಜೆಪಿಯ ಸಾಗರೋತ್ತರ ಸ್ನೇಹಿತರು

Published 3 ಮಾರ್ಚ್ 2024, 6:10 IST
Last Updated 3 ಮಾರ್ಚ್ 2024, 6:10 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಓವರ್ಸೀಸ್‌ ಫ್ರೆಂಡ್ಸ್ ಆಫ್‌ ಬಿಜೆಪಿ (OFBJP) ಪ್ರಚಾರವನ್ನು ಆರಂಭಿಸಿದೆ.

ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳಲ್ಲಿ ಗೆಲ್ಲಲು ಸ್ವಯಂಸೇವಕರಾಗಿ ಕೊಡುಗೆ ನೀಡಲು ಹಲವು ಮಂದಿ ಅನಿವಾಸಿ ಭಾರತೀಯರು ಪ್ರತಿಜ್ಞೆ ಮಾಡಿದರು.

‘ಭಾರತೀಯ ಸಮುದಾಯವು ಬಿಜೆಪಿಯನ್ನು ಬೆಂಬಲಿಸಲಿದೆ’ ಎಂದು ವಾಷಿಂಗ್ಟನ್‌ ಡಿ.ಸಿಯ ಮೇರಿಲ್ಯಾಂಡ್‌ನಲ್ಲಿ ನಡೆದ ಪ್ರಚಾರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ OFBJP ಅಧ್ಯಕ್ಷ ಅಡಪ ಪ್ರಸಾದ್‌ ಹೇಳಿದ್ದಾರೆ.

ಈ ಸಭೆಯಲ್ಲಿ OFBJPಯ ಸುಮಾರು 100 ಮಂದಿ ಪ್ರಮುಖರು ಭಾಗವಹಿಸಿದ್ದರು.

ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಪಂಜಾಬ್, ಹರಿಯಾಣ, ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿಷಯಗಳ ಬಗ್ಗೆ ತಾವು ಮಾಡಿದ್ದ ವಿಶ್ಲೇಷಣೆಗಳ ಬಗ್ಗೆ ಪ್ರದರ್ಶನ ನಡೆಸಲಾಯಿತು.

‘‍‍ಪ್ರತಿ ರಾಜ್ಯಗಳಲ ಪ್ರಗತಿ ಬಗ್ಗೆ ನಾವು ಪರಿಶೀಲನೆ ನಡೆಸಿದೆವು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಬಗ್ಗೆ ವಿಸ್ತೃತವಾದ ಪ್ರದರ್ಶನ ನೀಡಲಾಯಿತು’ ಎಂದು ಅಡಪ ತಿಳಿಸಿದರು.

ಈವರೆಗೆ 3 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಚುನಾವಣೆ ಸಂಬಂಧ ವಿವಿಧ ಚಟುವಟಿಕೆಗಳಲ್ಲಿ OFBJP ಜತೆ ಕೆಲಸ ಮಾಡಲು ಸಹಿ ಹಾಕಿದ್ದಾರೆ. ಇದರಲ್ಲಿ ಸಾಮಾಜಿಕ ಜಾಲತಾಣ, ಫೋನ್ ಕರೆ, ಮತದಾರರ ವಿಶ್ಲೇಷಣೆ, ನೇರ ಪ್ರಚಾರ ಹಾಗೂ ಭಾರತಕ್ಕೆ ಪ್ರವಾಸ ಮಾಡುವುದು ಸೇರಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಸತತ ಮೂರನೇ ಬಾರಿಗೆ ಮರು ಆಯ್ಕೆ ಮಾಡಲು ಅಮೆರಿಕದಿಂದ ಭಾರತಕ್ಕೆ 25 ಲಕ್ಷ ಫೊನ್ ಕರೆ ಮಾಡುವ ಯೋಜನೆ ಕೂಡ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT