ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮಾಜಿಕ ಜಾಲತಾಣಗಳ ನಿಷೇಧಕ್ಕೆ ಪಾಕಿಸ್ತಾನ ಸೆನೆಟರ್‌ ಆಗ್ರಹ

Published 3 ಮಾರ್ಚ್ 2024, 13:01 IST
Last Updated 3 ಮಾರ್ಚ್ 2024, 13:01 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಯುವ ಪೀಳಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಕಾರಣ ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪಾಕಿಸ್ತಾನದಲ್ಲಿ ಶಾಶ್ವತವಾಗಿ ನಿಷೇಧಿಸುವಂತೆ ಸೆನೆಟ್‌ ಸದಸ್ಯರೊಬ್ಬರು ಒತ್ತಾಯಿಸಿದ್ದಾರೆ.

ಈಗಾಗಲೇ ಪಾಕಿಸ್ತಾನದಲ್ಲಿ 15 ದಿನಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್‌’ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ. ಅದರ ಬೆನ್ನಲ್ಲೇ ಸೆನೆಟ್‌ ಸದಸ್ಯ ಬಹ್ರಮಂಡ್‌ ಖಾನ್‌ ತಂಗಿ ಈ ಕುರಿತು ನಿರ್ಣಯ ಕೈಗೊಳ್ಳಲು ಕರೆ ನೀಡಿದ್ದಾರೆ. ಸೆನೆಟ್‌ ಅಧಿವೇಶನದ ಸೋಮವಾರದ ಕಾರ್ಯಸೂಚಿಯಲ್ಲಿ ಈ ಕುರಿತು ನಿರ್ಣಯವನ್ನು ಪಟ್ಟಿ ಮಾಡಲಾಗಿದೆ.

ಫೆಬ್ರುವರಿ 8ರ ಚುನಾವಣೆಯ ವಿಳಂಬ ಕುರಿತು ನಿರ್ಣಯ ಮಂಡಿಸಿದ ಬಳಿಕ, ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಬಹ್ರಮಂಡ್‌ ಖಾನ್‌ ಅವರನ್ನು ಪಕ್ಷದಿಂದ ಹೊರಹಾಕಿದೆ. 

ಮಾರ್ಚ್‌ 11ರಂದು ನಿವೃತ್ತರಾಗಲಿರುವ ಖಾನ್‌ ಅವರು, ‘ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದ ಯುವ ಪೀಳಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಅಲ್ಲದೆ ಅವು ನಮ್ಮ ಧರ್ಮ, ಸಂಸ್ಕೃತಿಯ ವಿರುದ್ಧ ಪ್ರಚಾರ ಮಾಡಲು ಬಳಕೆಯಾಗುತ್ತಿದ್ದು, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ಜನರ ನಡುವೆ ದ್ವೇಷ ಬಿತ್ತುತ್ತಿವೆ’ ಎಂದು ದೂರಿದ್ದಾರೆ.

ಪಾಕಿಸ್ತಾನದ ಸಶಸ್ತ್ರ ಪಡೆಗಳ ವಿರುದ್ಧ ಮತ್ತು ದೇಶದ ಹಿತಾಸಕ್ತಿಗಳ ವಿರುದ್ಧ ಈ ವೇದಿಕೆಗಳು ಬಳಕೆಯಾಗುತ್ತಿವೆ. ಅಲ್ಲದೆ ಯುವ ಪೀಳಿಗೆಯ ಮೆಲೆ ನಕಾರಾತ್ಮಕ ಮತ್ತು ವಿನಾಶಕಾರಿ ಪರಿಣಾಮಗಳನ್ನು ಬೀರುವ ಫೇಸ್‌ಬುಕ್‌, ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್‌, ‘ಎಕ್ಸ್‌’ ವೇದಿಕೆಗಳನ್ನು ನಿಷೇಧಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಅವರು ಸೆನೆಟ್‌ ಅನ್ನು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT