ಜಂಟಿ ತನಿಖಾ ತಂಡದಲ್ಲಿ (ಜೆಐಟಿ) ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಜತೆಗೆ ಇಂಟೆಲಿಜೆನ್ಸ್ ಬ್ಯೂರೊ (ಐಬಿ), ರಾಷ್ಟ್ರೀಯ ದತ್ತಾಂಶ ಮತ್ತು ನೋಂದಣಿ ಪ್ರಾಧಿಕಾರ (ಎನ್‌ಎಡಿಆರ್‌ಎ), ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ(ಪಿಟಿಎ) ಸೇರಿಸಲಾಗಿದೆ. ಅಗತ್ಯವಿದ್ದರೆ ಐ.ಟಿ ತಜ್ಞರನ್ನು ಸಹ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಜೆಐಟಿಯು 15 ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಉಸ್ತುವಾರಿ ಸರ್ಕಾರ ಸೂಚಿಸಿದೆ.