ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಫ್ರಾನ್ಸ್‌ ಭೇಟಿ ಅಂತ್ಯ: ಅಬುದಾಬಿಗೆ ತಲುಪಿದ ಪ್ರಧಾನಿ

Published : 15 ಜುಲೈ 2023, 2:22 IST
Last Updated : 15 ಜುಲೈ 2023, 2:22 IST
ಫಾಲೋ ಮಾಡಿ
Comments

ಪ್ಯಾರಿಸ್‌ : ಎರಡು ದಿನಗಳ ಫ್ರಾನ್ಸ್‌ ಪ್ರವಾಸ ಮುಗಿಸಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ತಲುಪಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ, ಪ್ರಧಾನಿ ಅವರ ಫ್ರಾನ್ಸ್‌ ಭೇಟಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಅಬುದಾಬಿಯತ್ತ ಅವರು ಪ್ರಯಾಣ ಬೆಳಸಿದ್ದಾರೆ ಎಂದು ಫೋಟೊ ಸಮೇತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಹಯಾನ್‌ರೊಂದಿಗೆ ಮಾತುಕತೆ ನಡೆಸಲಿರುವ ಅವರು ಇಂಧನ, ಆಹಾರ ಭದ್ರತೆ ಮತ್ತು ರಕ್ಷಣೆಯ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ  ಇದೆ. ಜತೆಗೆ ಕೆಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶದ ನಾಯಕರು ಸಹಿ ಹಾಕಲಿದ್ದಾರೆ.

ಫ್ರಾನ್ಸ್‌ ಭೇಟಿ ವೇಳೆ ಪ್ರಧಾನಿ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಭಾಜನರಾಗಿದ್ದಾರೆ. ಅಲ್ಲದೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್  ಅವರಿಗೆ ಸಂಗೀತ ವಾದ್ಯ ಸಿತಾರ್ ನ ಶ್ರೀಗಂಧದ ಪ್ರತಿಕೃತಿ ಹಾಗೂ ಅವರ ಪತ್ನಿ ಬ್ರಿಗಿಟಿ ಮ್ಯಾಕ್ರನ್ ಗೆ ಪೊಚಂಪಲ್ಲಿ ಸಿಲ್ಕ್ ಇಕ್ಕತ್‌ ಸೀರೆಯನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು  ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

25 ವರ್ಷಗಳ ಮುಂದಾಲೋಚನೆಯು ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಯಾಗಿಸಲು, ಸ್ನೇಹಪರ ದೇಶಗಳ ನಡುವೆ ಮಿಲಿಟರಿ, ಉತ್ಪಾದನೆ ಸೇರಿ ಹಲವು ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ನೆರವಾಗಲಿದೆ ಎಂದು ಭಾರತ ಮತ್ತು ಫ್ರಾನ್ಸ್ ಶುಕ್ರವಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT