ಇಸ್ಲಾಮಾಬಾದ್/ಲಾಹೋರ್: ಪಾಕಿಸ್ತಾನದಲ್ಲಿ ಒಟ್ಟು 21 ರಾಷ್ಟ್ರೀಯ, ಪ್ರಾಂತ್ಯವಾರು ಕ್ಷೇತ್ರಗಳಿಗೆ ಭಾನುವಾರ ಬಿಗಿ ಭದ್ರತೆಯಲ್ಲಿ ಉಪ ಚುನಾವಣೆ ನಡೆಯಿತು. ಪಂಜಾಬ್, ಬಲೂಚಿಸ್ತಾನದ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.

ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಮತದಾನದ ಬಳಿಕ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮಧ್ಯರಾತ್ರಿ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಬಿಗಿ ಭದ್ರತೆ ನಡುವೆಯೂ ಅಲ್ಲಲ್ಲಿ ಹಿಂಸಾಚಾರ ಘಟನೆಗಳು ನಡೆದಿವೆ. ಪಂಜಾಬ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ನರೋವಲ್, ಶೇಖ್‌ಪುರ, ರಹೀಂ ಯಾರ್ ಖಾನ್‌ನ ವಿವಿಧೆಡೆ ಘರ್ಷಣೆಗಳು ನಡೆದಿವೆ ಎಂದು ತಿಳಿಸಿದೆ.

ಫೆಬ್ರುವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆಗ, ಒಂದು ರಾಷ್ಟ್ರೀಯ ಮತ್ತು ಎರಡು ಪ್ರಾಂತ್ಯವಾರು ಕ್ಷೇತ್ರಗಳಲ್ಲಿ ಚುನಾವಣೆ ರದ್ದುಪಡಿಸಲಾಗಿದೆ. ಕೆಲವರು ರಾಷ್ಟ್ರೀಯ ಮತ್ತು ಪ್ರಾಂತ್ಯ ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಒಂದು ಕ್ಷೇತ್ರ ಉಳಿಸಿಕೊಂಡು ಇನ್ನೊಂದಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಗಳು ಸೇರಿ ಈ 21 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.