ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಫೋರ್ನಿಯಾ ನೆವಾಡದಲ್ಲಿ ಬಿರುಗಾಳಿ, ಮಳೆ

Published 2 ಮಾರ್ಚ್ 2024, 13:13 IST
Last Updated 2 ಮಾರ್ಚ್ 2024, 13:13 IST
ಅಕ್ಷರ ಗಾತ್ರ

ರೆನೊ: ಅಮೆರಿಕದ ಸಿಯೆರಾ ನೆವಡಾದಲ್ಲಿ ಶುಕ್ರವಾರ ತಡರಾತ್ರಿ ಹಿಮಪಾತ ಸಹಿತ ಭಾರಿ ಬಿರುಗಾಳಿ ಅಪ್ಪಳಿಸಿದೆ. ಪರಿಣಾಮವಾಗಿ ಕ್ಯಾಲಿಫೋರ್ನಿಯಾದಲ್ಲಿ ಅಂತರರಾಜ್ಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ಗುಡುಗುಸಹಿತ ಭಾರಿ ಮಳೆ ಸುರಿಯುತ್ತಿರುವ ಕಾರಣ ವಿದ್ಯುತ್ ಸೇವೆಯಲ್ಲಿಯೂ ವ್ಯತ್ಯಯವಾಗಿದೆ.

ಕೆಲವು ಪ್ರದೇಶಗಳಲ್ಲಿ 10 ಅಡಿಗಳ ವರೆಗೆ ಹಿಮ ಬಿದ್ದಿದೆ. ‘ಕೇಂದ್ರ ಸಿಯೆರಾದಲ್ಲಿ ಭಾನುವಾರದ ವರೆಗೆ ಭಾರಿ ಹಿಮಪಾತವಾಗುವ ಸಾಧ್ಯತೆ ಇದೆ’ ಎಂದು ರೆನೊದಲ್ಲಿರುವ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಸಂಸ್ಥೆ ತಿಳಿಸಿದೆ.

ಬಿರುಗಾಳಿ ಮತ್ತು ಕಡಿಮೆ ಗೋಚರತೆಯ ಕಾರಣದಿಂದಾಗಿ 100 ಮೈಲಿ ಹೆದ್ದಾರಿಯನ್ನು ಶುಕ್ರವಾರ ಕ್ಯಾಲಿಫೋರ್ನಿಯಾ ಅಧಿಕಾರಿಗಳು ಬಂದ್‌ ಮಾಡಿದ್ದಾರೆ.  ರಸ್ತೆಯು ವಾಹನಗಳ ಸಂಚಾರಕ್ಕೆ ಯಾವಾಗ ಮುಕ್ತವಾಗುವುದೆಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ಮದೇರಾ ಕೌಂಟಿಯಲ್ಲಿಯೂ ಹಿಮಪಾತ ಸಹಿತ ಬಿರುಗಾಳಿ ತನ್ನ ಕಬಂಧಬಾಹುವನ್ನು ಚಾಚಿದ್ದು, ಕೆಲ ಪ್ರಾಥಮಿಕ ಶಾಲೆಗಳಿಗೆ ಹಾನಿಯಾಗಿದೆ. ಕೆಲ ಸ್ಕಿ ರೆಸಾರ್ಟ್‌ಗಳನ್ನು ಈಗಾಗಲೇ ಮುಚ್ಚಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT