ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿನ ಭಾರತೀಯ ದಲಿತ ಹೋರಾಟಗಾರ ಮಿಲಿಂದ್ ಮಕ್ವಾನಾ ನಿಧನ

ಕ್ಯಾಲಿಫೋರ್ನಿಯಾದಲ್ಲಿ ಮಿಲಿಂದ್ ಅವರು SB403 ವಿರುದ್ಧ ತೀವ್ರ ಧ್ವನಿ ಎತ್ತಿದ್ದರು.
Published 24 ಜುಲೈ 2023, 5:43 IST
Last Updated 24 ಜುಲೈ 2023, 5:43 IST
ಅಕ್ಷರ ಗಾತ್ರ

ವಾಷಿಂಗ್ಟನ್: ದಲಿತರ, ಶೋಷಿತರ ಪರವಾಗಿ ಹೋರಾಟ ಮಾಡುವುದರಲ್ಲಿ ಅಮೆರಿಕದಲ್ಲಿ ಮುಂಚೂಣಿಯಲ್ಲಿದ್ದ ಮಿಲಿಂದ್ ಮಕ್ವಾನಾ (54) ಎನ್ನುವರು ಭಾನುವಾರ ಮೃತಪಟ್ಟಿದ್ದಾರೆ.

ಮಿಲಿಂದ್ ಅವರ ಪತ್ನಿ ಹೇಳಿಕೆ ಉಲ್ಲೇಖಿಸಿ ಪಿಟಿಐ ಈ ವರದಿ ಮಾಡಿದೆ.

ಕ್ಯಾಲಿಫೋರ್ನಿಯಾ ಸ್ಟೇಟ್ ಅಸೆಂಬ್ಲಿಯು ಇತ್ತೀಚೆಗೆ ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು (SB403) ತರಲು ಹೊರಟಿದೆ. ‘ಇದು ಅಮೆರಿಕದಲ್ಲಿ ಭಾರತೀಯ ಹಿಂದೂಗಳ ನಡುವೆ ಹಾಗೂ ಭಾರತೀಯ ದಲಿತರ ನಡುವೆ ತಾರತಮ್ಯ ಮಾಡುತ್ತದೆ’ ಎಂದು ಮಿಲಿಂದ್ ಅವರು SB403 ವಿರುದ್ಧ ತೀವ್ರ ಧ್ವನಿ ಎತ್ತಿದ್ದರು.

ಇತ್ತೀಚೆಗೆ ಮಿಲಿಂದ್ ಅವರು ಸಿಟಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವಾಗಿ ಸುಧೀರ್ಘ ಭಾಷಣ ಮಾಡಿದ್ದರು. ಭಾನುವಾರ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಹೃದಯ ಸ್ತಂಭನದಿಂದ ಅವರ ಸಾವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಿಲಿಂದ್ ಅವರು Sewa International USA ನಲ್ಲಿ ಸಕ್ರಿಯ ಸ್ವಯಂಸೇವಕರಾಗಿದ್ದರು. ಅಲ್ಲದೇ ಅಮೆರಿಕದಲ್ಲಿ ಭಾರತೀಯ ದಲಿತರ ಹಾಗೂ ಶೋಷಿತರ ಬಗ್ಗೆ ಹೋರಾಟಗಳಲ್ಲಿ, ಸಮಾವೇಶಗಳಲ್ಲಿ, ಸೆಮಿನಾರ್‌ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.

ಮಿಲಿಂದ್ ಮಕ್ವಾನಾ Ambedkar-Phule Network of American Dalits and Bahujans (APNADB) ಸದಸ್ಯರೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT