ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್‌ ಮಿಶ್ರಾಗೆ ‘ಫ್ರೀಡಂ ಆಫ್‌ ದಿ ಸಿಟಿ ಆಫ್‌ ಲಂಡನ್' ಪ್ರಶಸ್ತಿ

Published 25 ಜನವರಿ 2024, 13:14 IST
Last Updated 25 ಜನವರಿ 2024, 13:14 IST
ಅಕ್ಷರ ಗಾತ್ರ

ಲಂಡನ್‌ : ಬ್ರಿಟನ್‌ನಲ್ಲಿರುವ ಭಾರತೀಯ ಸಂಜಾತ ವಕೀಲ ಅಜಿತ್‌ ಮಿಶ್ರಾ, ಪ್ರತಿಷ್ಠಿತ ‘ಫ್ರೀಡಂ ಆಫ್‌ ದಿ ಸಿಟಿ ಆಫ್‌ ಲಂಡನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

’ಯುಕೆ ಇಂಡಿಯಾ ಲೀಗಲ್‌ ಪಾರ್ಟ್‌ನರ್‌ಶಿಪ್‌‘ (ಯುಕೆಐಎಲ್‌ಪಿ) ಸಂಸ್ಥಾಪಕ ಮತ್ತು ಅಧ್ಯಕ್ಷರೂ ಆಗಿರುವ ಮಿಶ್ರಾ ಅವರು ಕಾನೂನು ಮತ್ತು ಸಾರ್ವಜನಿಕ ಜೀವನಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಸ್ಮರಿಸಿ ಈ ಪ್ರಶಸ್ತಿ ನೀಡಲಾಗಿದೆ. ಅವರಿಗೆ ಜನವರಿ 23ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

‘ವಕೀಲ ವೃತ್ತಿ ಆರಂಭಿಸಿದ ಲಂಡನ್‌ ನಗರವೇ ನನ್ನನ್ನು ಗುರುತಿಸಿರುವುದು ಹೆಮ್ಮೆಯ ಕ್ಷಣವಾಗಿದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

ಸುಮಾರು 13ನೇ ಶತಮಾನದಿಂದ ’ಸಿಟಿ ಆಫ್ ಲಂಡನ್ ಕಾರ್ಪೊರೇಷನ್‘ ಈ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದು, ಲಂಡನ್‌ ನಗರ ಮತ್ತು ಸಾರ್ವಜನಿಕ ಜೀವನಕ್ಕೆ ಮಹತ್ವದ ಕೊಡುಗೆ ನೀಡಿದವರನ್ನು ಆಯ್ಕೆ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್‌ ನೆಹರೂ, ಯುಕೆ ಮಾಜಿ ಪ್ರಧಾನಿಗಳಾದ ವಿನ್‌ಸ್ಟನ್‌ ಚರ್ಚಿಲ್‌, ಮಾರ್ಗರೇಟ್‌ ಥ್ಯಾಚರ್‌, ಸಿಂಗಪುರದ ಮೊದಲ ಪ್ರಧಾನಿ ಲೀ ಕುವಾನ್‌ ಯು, ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ನೆಲ್ಸನ್‌ ಮಂಡೇಲಾ ಸೇರಿದಂತೆ ಅನೇಕ ಪ್ರಮುಖರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT