ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಮೇಲೆ 48 ಡ್ರೋನ್‌ಗಳಿಂದ ದಾಳಿ ನಡೆಸಿದ ರಷ್ಯಾ

ಉಕ್ರೇನ್‌ ಮೇಲೆ ರಷ್ಯಾವು ಇರಾನ್‌ ನಿರ್ಮಿತ 48 ಡ್ರೋನ್‌ಗಳಿಂದ ಮಂಗಳವಾರ ರಾತ್ರಿ ದಾಳಿ ನಡೆಸಿದೆ.
Published 6 ಡಿಸೆಂಬರ್ 2023, 14:47 IST
Last Updated 6 ಡಿಸೆಂಬರ್ 2023, 14:47 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ ಮೇಲೆ ರಷ್ಯಾವು ಇರಾನ್‌ ನಿರ್ಮಿತ 48 ಡ್ರೋನ್‌ಗಳಿಂದ ಮಂಗಳವಾರ ರಾತ್ರಿ ದಾಳಿ ನಡೆಸಿದೆ.

ರಷ್ಯಾದ ಪಡೆಗಳು ವಿದ್ಯುತ್‌ ಗ್ರಿಡ್‌ಗಳನ್ನು ಗುರಿಯಾಗಿಸಿ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿವೆ. ಪ್ರತಿದಾಳಿ ನಡೆಸಿ 41 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ನ ವಾಯುಪಡೆಯ ಮೂಲಗಳು ತಿಳಿಸಿವೆ.

ಕಳೆದ ಚಳಿಗಾಲದಲ್ಲಿ ರಷ್ಯಾಪಡೆಗಳು ವಿದ್ಯುತ್‌ ಗ್ರಿಡ್‌ಗಳ ಮೇಲೆ ದಾಳಿ ನಡೆಸಿದ್ದರ ಪರಿಣಾಮ ಉಕ್ರೇನ್‌ನ ಲಕ್ಷಾಂತರ ಮಂದಿ ಚಳಿಯಿಂದ ಸಂಕಷ್ಟ ಅನುಭವಿಸಿದ್ದರು.

ಪಾಶ್ಚಾತ್ಯ ದೇಶಗಳು ನೀಡಿರುವ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್‌‌ನ ವಾಯುಪಡೆಯು ರಷ್ಯಾದ ಪಡೆಗಳ ಮೇಲೆ ಪ್ರತಿ ದಾಳಿ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT