ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಮೇಲೆ ಕ್ಷಿಪಣಿ ಸುರಿಮಳೆಗರೆದ ರಷ್ಯಾ

Published 27 ಏಪ್ರಿಲ್ 2024, 15:30 IST
Last Updated 27 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಕೀವ್‌ : ದಕ್ಷಿಣ ರಷ್ಯಾ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ ನಡೆಸಿದ ಬೆನ್ನಲ್ಲೇ ಪ್ರತೀಕಾರವಾಗಿ ರಷ್ಯಾ, ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಶುಕ್ರವಾರ ರಾತ್ರೋರಾತ್ರಿ ಕ್ಷಿಪಣಿಗಳ ಸುರಿಮಳೆಗರೆದಿದೆ. ದೇಶದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಿದೆ.

ಇದರ ನಡುವೆ, ದಕ್ಷಿಣ ಕ್ರಸ್ನೋದರ್‌ ಮೇಲೆ ತೂರಿ ಬಂದ ಉಕ್ರೇನ್‌ನ 66 ಡ್ರೋನ್‌ಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿವೆ. ಸ್ವಾಧೀನಪಡಿಸಿಕೊಂಡ ಕ್ರಿಮಿಯಾ ದ್ವೀಪವನ್ನು ಗುರಿಯಾಗಿಸಿದ್ದ ಎರಡು ಡ್ರೋನ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ರಷ್ಯಾ ಹೇಳಿದೆ.

ಉಕ್ರೇನ್‌ ಪಡೆಗಳು ತೈಲ ಸಂಸ್ಕರಣಾಗಾರ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿವೆ. ಆದರೆ, ಯಾವುದೇ ಸಾವುನೋವು ಅಥವಾ ಗಂಭೀರ ಹಾನಿ ಆಗಿಲ್ಲ ಎಂದು ಕ್ರಸ್ನೋದರ್‌ ಪ್ರದೇಶದ ಗವರ್ನರ್ ವೆನಿಯಾಮಿನ್ ಕೊಂಡ್ರಾಟ್ಯೆವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT