ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಮಾಲಿಯಾ: ಗುಂಡಿನ ಕಾಳಗ– 100ಕ್ಕೂ ಹೆಚ್ಚು ಮಂದಿ ಸಾವು

Last Updated 20 ಜನವರಿ 2023, 13:45 IST
ಅಕ್ಷರ ಗಾತ್ರ

ಮೊಗದಿಶು, ಸೊಮಾಲಿಯಾ: ಸೇನೆ ಹಾಗೂ ಅಲ್‌ ಕೈದಾ ಬೆಂಬಲಿತ ಉಗ್ರರ ನಡುವಿನ ಭೀಕರ ಕಾಳಗದಲ್ಲಿ ಶುಕ್ರವಾರ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಈ ಕುರಿತು ಸೊಮಾಲಿಯಾ ಸರ್ಕಾರ ಹಾಗೂ ಉಗ್ರ ಸಂಘಟನೆ ಅಲ್‌ ಶಬಾಬ್ ಹೇಳಿಕೆಗಳನ್ನು ಬಿಡುಗಡೆ ಮಾಡಿವೆ.

‘ಉಗ್ರ ಸಂಘಟನೆ ಅಲ್‌ ಶಬಾಬ್‌ಗೆ ಸೇರಿದ 100ಕ್ಕೂ ಅಧಿಕ ಉಗ್ರರು ಗುಂಡಿನ ಕಾಳಗದಲ್ಲಿ ಹತರಾಗಿದ್ದಾರೆ. ಅಮೆರಿಕದಿಂದ ತರಬೇತಿ ಪಡೆದಿರುವ ದಾನಾಬ್‌ ಬ್ರಿಗೇಡ್‌ನ ಒಬ್ಬ ಅಧಿಕಾರಿ ಸೇರಿದಂತೆ ಏಳು ಜನ ಯೋಧರು ಮೃತಪಟ್ಟಿದ್ದಾರೆ’ ಎಂದು ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೊಂದೆಡೆ, ‘ಸೊಮಾಲಿಯಾದ 150ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಲಾಗಿದೆ’ ಎಂದು ಅಲ್‌ ಶಬಾಬ್ ವಕ್ತಾರ ಶೇಖ್ ಅಬು ಮುಸಾಬ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT