ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವೀಡನ್‌ನಿಂದ ಉಕ್ರೇನ್‌ಗೆ ₹10 ಸಾವಿರ ಕೋಟಿ ಸೇನಾ ನೆರವಿನ ಪ್ಯಾಕೇಜ್

Published 29 ಮೇ 2024, 14:18 IST
Last Updated 29 ಮೇ 2024, 14:18 IST
ಅಕ್ಷರ ಗಾತ್ರ

ಕೋಪನ್‌ಹೆಗನ್: ಉಕ್ರೇನ್‌ಗೆ 123 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹10,255 ಕೋಟಿ) ಮೊತ್ತದ ಸೇನಾ ನೆರವನ್ನು ನೀಡುವುದಾಗಿ ಸ್ವೀಡಿಶ್ ಸರ್ಕಾರ ಬುಧವಾರ ಪ್ರಕಟಿಸಿದೆ. 

ಸ್ವೀಡನ್ ಇದುವರೆಗೆ ನೀಡಿರುವ ಸೇನಾ ನೆರವಿನ ಪ್ಯಾಕೇಜ್‌ಗಳಲ್ಲಿಯೇ ಇದು ಅತಿ ದೊಡ್ಡದು ಎಂದು ಅದು ಹೇಳಿಕೊಂಡಿದೆ. 

ಉಕ್ರೇನ್‌ಗೆ ಸದ್ಯಕ್ಕೆ ಅತ್ಯಗತ್ಯವಾಗಿರುವ ಸೇನಾ ಸಾಧನಗಳನ್ನು ನೆರವಿನ ಪ್ಯಾಕೇಜ್‌ ಒಳಗೊಂಡಿದೆ. ವಾಯುಪಡೆಯ ರಕ್ಷಣಾ ಸಾಧನಗಳು, ಮದ್ದು–ಫಿರಂಗಿಗಳು, ಸಶಸ್ತ್ರ ವಾಹನಗಳನ್ನು ಉಕ್ರೇನ್‌ಗೆ ಒದಗಿಸಲಾಗುವುದು ಎಂದು ಸ್ವೀಡನ್‌ನ ಉಪ ಪ್ರಧಾನಿ ಎಬ್ಬಾ ಬುಶ್ ತಿಳಿಸಿದ್ದಾರೆ. 

ಸ್ವೀಡಿಶ್ ನಿರ್ಮಿತ ಜೆಎಎಸ್ 39 ಗ್ರಿಪನ್‌ ಜೆಟ್‌ಗಳನ್ನು ಉಕ್ರೇನ್‌ಗೆ ಕಳುಹಿಸುವ ಸಾಧ್ಯತೆ ಇಲ್ಲ ಎನ್ನುವುದನ್ನು ಪುನರುಚ್ಚರಿಸಿದ ಸ್ವೀಡನ್‌ ರಕ್ಷಣಾ ಸಚಿವ ಪಾಲ್‌ ಜಾನ್ಸನ್‌, ಎಫ್‌–16 ಫೈಟರ್‌ ಜೆಟ್‌ಗಳನ್ನು ಪೂರೈಸುವ ಕುರಿತು ಆಸಕ್ತಿ ಇರುವುದಾಗಿ ಹೇಳಿದ್ದಾರೆ. 

ಕೆಲವು ದೇಶಗಳು ಈಗಾಗಲೇ ಎಫ್–16 ಫೈಟರ್ ಜೆಟ್‌ಗಳನ್ನು ಉಕ್ರೇನ್‌ಗೆ ಒದಗಿಸಲು ಮುಂದೆ ಬಂದಿವೆ. 30 ಎಫ್‌–16 ಜೆಟ್‌ಗಳನ್ನು ಉಕ್ರೇನ್‌ಗೆ ನೀಡುವುದಾಗಿ ಮಂಗಳವಾರ ಬೆಲ್ಜಿಯಂ ವಾಗ್ದಾನ ಮಾಡಿದೆ. 

ಮುಂದಿನ ಹಂತದಲ್ಲಿ ಗ್ರಿಪನ್ ಜೆಟ್‌ಗಳನ್ನು ಉಕ್ರೇನ್‌ಗೆ ಒದಗಿಸುವ ಕುರಿತು ಆಲೋಚಿಸುವುದಾಗಿ ಜಾನ್ಸನ್ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT