ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ತೀವ್ರ ವಿರೋಧದ ನಡುವೆ ತೈವಾನ್ ಅಧ್ಯಕ್ಷರಾಗಿ ಲಾಯ್ ಚಿಂಗ್ ಟೆ ಆಯ್ಕೆ

Published 13 ಜನವರಿ 2024, 19:47 IST
Last Updated 13 ಜನವರಿ 2024, 19:47 IST
ಅಕ್ಷರ ಗಾತ್ರ

ತೈಪೆ: ಚೀನಾದ ತೀವ್ರ ವಿರೋಧದ ನಡುವೆ ತೈವಾನ್ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪ್ರೋಗ್ರೆಸ್ಸೀವ್ ಪಕ್ಷದ ಲಾಯ್ ಚಿಂಗ್ ಟೆ ಶನಿವಾರ ಆಯ್ಕೆಯಾಗಿದ್ದಾರೆ. 

ಅಂತಿಮ ಮತ ಎಣಿಕೆಯ ನಂತರ ಕೇಂದ್ರ ಚುನಾವಣಾ ಆಯೋಗವು ಲಾಯ್ ಚಿಂಗ್ ಟೆ ಶೇ 40.1 ಮತ ಗಳಿಸಿ ವಿಜಯ ಸಾಧಿಸಿದ್ದಾರೆ ಎಂದು ಘೋಷಿಸಿತು. ಅವರ ಪ್ರತಿಸ್ಪರ್ಧಿ ಹೌ ಯು–ಇ ಶೇ 33.5ರಷ್ಟು ಮತಗಳನ್ನು ಪಡೆದಿದ್ದಾರೆ.      

ಲಾಯ್, ಚೀನಾ ಬೆದರಿಕೆ ಮತ್ತು ಎಚ್ಚರಿಕೆಗಳನ್ನು ಬದಿಗೊತ್ತಿ ‘ತೈವಾನ್ ಪ್ರಜಾಪ್ರಭುತ್ವದಲ್ಲಿ ಹೊಸ ಅಧ್ಯಾಯ ಬರೆದದ್ದಕ್ಕಾಗಿ‘ ಜನರಿಗೆ ಧನ್ಯವಾದ ತಿಳಿಸಿದರು. 

ಗೆಲುವಿನ ನಂತರ ಮಾತನಾಡಿದ ಲಾಯ್, ತಾವು ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದಾಗಿ ತಿಳಿಸಿದರು. ಆದರೆ, ಚೀನಾದ ಬೆದರಿಕೆಗಳಿಂದ ತೈವಾನ್ ಅನ್ನು ಪಾರು ಮಾಡುವುದಾಗಿ ಪ್ರತಿಜ್ಞೆ ಮಾಡಿದರು.     

ಮತದಾನಕ್ಕೆ ಮುನ್ನ ಲಾಯ್ ಅವರನ್ನು ಬೀಜಿಂಗ್ ‘ತೀವ್ರ ಅಪಾಯಕಾರಿ‘ ಎಂದು ಕರೆದು, ಅವರನ್ನು ಸೋಲಿಸುವಂತೆ ಜನರಿಗೆ ಕರೆ ಕೊಟ್ಟಿತ್ತು. ಶನಿವಾರದ ಚುನಾವಣಾ ಫಲಿತಾಂಶವು ಚೀನಾದ ಪುನರ್ ಮಿಲನವನ್ನು ತಡೆಯಲಾಗದು ಎಂದು ಚೀನಾ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT