ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌: ರಾಜಾ ರಾಮಾ–10 ಪಟ್ಟಾಭಿಷೇಕ ಮೇ 4ರಂದು

Last Updated 2 ಮೇ 2019, 20:00 IST
ಅಕ್ಷರ ಗಾತ್ರ

ಬ್ಯಾಂಕಾಕ್‌ : ಥಾಯ್ಲೆಂಡ್‌ನ ರಾಜಾ ಮಹಾ ವಜಿರಲೊಂಗ್‌ಕಾರ್ನ್‌ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಮೇ 4ರಂದು ನೆರವೇರಲಿದೆ.

ಪಟ್ಟಾಭಿಷೇಕ ಸಮಾರಂಭದ ಅಂಗವಾಗಿ ಮೇ 4 ರಿಂದ 6ರ ವರೆಗೆ ಹಿಂದೂ ಮತ್ತು ಬೌದ್ಧ ಧರ್ಮದ ಸಂಪ್ರದಾಯದಂತೆ ವಿಧಿಗಳು ನೆರವೇರಲಿವೆ. ಅವರಿಗೆ ಮಾ–10 ಎಂಬುದಾಗಿಯೂ ನಾಮಕರಣವಾಗಿದೆ.

ವಜಿರಲೊಂಗ್‌ಕಾರ್ನ್‌ ಅವರು ಎರಡು ವರ್ಷಗಳ ಹಿಂದೆಯೇ ಸಿಂಹಾಸನವನ್ನು ಅಲಂಕರಿಸಿದ್ದರು. ಆದರೆ, ಅವರ ತಂದೆ ಭೂಮಿಬೋಲ್‌ ಅದುಲ್ಯದೇಜ್‌ ನಿಧನರಾದ ಕಾರಣ ಪಟ್ಟಾಭಿಷೇಕ ನಡೆದಿರಲಿಲ್ಲ. ಈಗ ಮೂರು ದಿನಗಳವರೆಗೆ ಸಮಾರಂಭ ನಡೆಯಲಿದೆ. ಥಾಯ್ಲೆಂಡ್‌ ಸರ್ಕಾರ ಈ ಸಮಾರಂಭಕ್ಕಾಗಿ ₹ 21 ಕೋಟಿ ತೆಗೆದಿರಿಸಿದೆ.

ವಿವಾಹ: ಪಟ್ಟಾಭಿಷೇಕ ಸಮಾರಂಭ ಕೆಲವೇ ದಿನಗಳು ಬಾಕಿ ಇರುವಾಗ, ರಾಜಾ ಮಹಾ ವಜಿರಲೊಂಗ್‌ಕಾರ್ನ್‌ ತಮ್ಮ ಭದ್ರತಾ ಪಡೆಯ ಉಪ ಮುಖ್ಯಸ್ಥಳನ್ನು ಬುಧವಾರ ವಿವಾಹವಾಗಿದ್ದಾರೆ. ಪತ್ನಿಯನ್ನು ರಾಣಿ ಸುಥಿದಾ ಎಂದು ಹೆಸರಿಸಿದ್ದಾರೆ. ಥಾಯ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದ ಸುಥಿದಾ ಅವರನ್ನು 2014ರಲ್ಲಿ ತಮ್ಮ ಭದ್ರತಾ ಪಡೆಯ ಉಪಮುಖ್ಯಸ್ಥಳನ್ನಾಗಿ ನೇಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT