ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕೋವಿಡ್‌ ನೆರವು ಪಡೆದು ವಂಚನೆ– ಇಬ್ಬರು ಭಾರತೀಯರು ದೋಷಿ

Published 4 ಅಕ್ಟೋಬರ್ 2023, 11:47 IST
Last Updated 4 ಅಕ್ಟೋಬರ್ 2023, 11:47 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಕೋವಿಡ್‌ ಪಿಡುಗಿನ ನಂತರ ಜಾರಿಯಲ್ಲಿದ್ದ ಆರ್ಥಿಕ ನೆರವು ಯೋಜನೆಯಡಿ ಸಾಲ ಪ‍ಡೆದು ಕೋಟ್ಯಂತರ ರೂಪಾಯಿ ವಂಚಿಸಿ, ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಭಾರತ ಮೂಲದ ಇಬ್ಬರನ್ನು ದೋಷಿಗಳು ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

41 ವರ್ಷದ ನಿಶಾಂತ್‌ ಪಟೇಲ್ ₹ 3.9 ಕೋಟಿ ಹಾಗೂ 49 ವರ್ಷದ ಹರ್ಜೀತ್‌ ಸಿಂಗ್‌ ₹ 7.8 ಕೋಟಿ ವಂಚಿಸಿದ್ದಾರೆ. ಸಾಲ ಪಡೆಯುವುದಕ್ಕಾಗಿ ಸುಳ್ಳು ಅರ್ಜಿಗಳನ್ನು ಸಲ್ಲಿಸಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಇಲಾಖೆ ಹೇಳಿದೆ.

ಈ ಇಬ್ಬರಿಗೆ ಶಿಕ್ಷೆಯ ಪ್ರಮಾಣವನ್ನು ಮುಂದಿನ ವರ್ಷ ಜನವರಿ 4ರಂದು ಘೋಷಿಸಲಾಗುತ್ತದೆ. ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT