ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್‌ ಸಂಸತ್ತು ಉದ್ದೇಶಿಸಿ ಕಿಯರ್ ಸ್ಟಾರ್ಮರ್ ಮೊದಲ ಭಾಷಣ

Published 9 ಜುಲೈ 2024, 16:13 IST
Last Updated 9 ಜುಲೈ 2024, 16:13 IST
ಅಕ್ಷರ ಗಾತ್ರ

ಲಂಡನ್: ಬ್ರಿಟಿಷ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವೈವಿಧ್ಯ ರೀತಿಯ ಲಿಂಗ ಮತ್ತು ಜನಾಂಗವನ್ನು ಒಳಗೊಂಡಿರುವ ಬ್ರಿಟನ್‌ ಸಂಸತ್ತನ್ನು ಉದ್ದೇಶಿಸಿ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಮಂಗಳವಾರ ಭಾಷಣ ಮಾಡಿದರು. 

ಪ್ರಧಾನಿಯಾಗಿ ಅವರು ಸಂಸತ್ತನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣವಿದು. ಸ್ಟಾರ್ಮರ್ ಅವರಿಗೆ ಶುಭ ಕೋರಿದ ಪ್ರತಿಪಕ್ಷದ ನಾಯಕ ರಿಷಿ ಸುನಾಕ್ ಅವರು, ಎದುರಿಸಬೇಕಾದ ಹಲವು ಸವಾಲುಗಳಿವೆ ಎಂದು ಹೇಳಿದರು. 

‘ರಾಜಕೀಯವು ಉತ್ತಮ ಕೆಲಸಗಳಿಗಾಗಿ ಇರುವ ಪಡೆಯ ರೀತಿ ಕಾಣುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ರಾಜಕೀಯ ವಿರೋಧಗಳು ಏನೇ ಇರಲಿ, ದೇಶಕ್ಕಾಗಿ ಒಂದಾಗಿ ಮುನ್ನಡೆಯಲು ಇದು ಸುಸಂದರ್ಭ. ಹೊಸ ಸಂಸತ್ತನ್ನು ಸೇವೆಗಳ ಸಂಸತ್ತು ಆಗಿಸೋಣ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT