ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 9 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್‌ ಪಡೆ

Published 3 ಫೆಬ್ರುವರಿ 2024, 15:15 IST
Last Updated 3 ಫೆಬ್ರುವರಿ 2024, 15:15 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್‌) (ಎಎಫ್‌ಪಿ): ದಕ್ಷಿಣ ಮತ್ತು ಮಧ್ಯ ಉಕ್ರೇನ್‌ ಪ್ರದೇಶದಲ್ಲಿ ರಷ್ಯಾದ ಒಂಬತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ನ ವಾಯುಪಡೆ ಶನಿವಾರ ತಿಳಿಸಿದೆ.

ಡಿನಿಪ್ರೊ, ಒಡೆಸಾ, ಮೈಕೊಲೈವ್ ನಗರಗಳ ಪವರ್‌ ಗ್ರಿಡ್‌ಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಡ್ರೋನ್‌ ದಾಳಿ ನಡೆಸಿವೆ ಎಂದು ಹೇಳಿದೆ. 

ಇರಾನ್‌ ನಿರ್ಮಿತ ಶಾಹಿದ್‌ ಡ್ರೋನ್‌ಗಳನ್ನು ಬಳಸಿ ರಷ್ಯಾ ದಾಳಿ ನಡೆಸಿದ್ದು, ದಾಳಿಯ ಬಳಿಕ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡ ಪರಿಣಾಮವಾಗಿ 15 ಸಾವಿರ ಮಂದಿ ಸಂಕಷ್ಟ ಅನುಭವಿಸಿದರು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT