ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡನ್‌ ಗೇಟ್ ಬ್ರಿಡ್ಜ್‌ನಿಂದ ಜಿಗಿದು ಇಂಡೊ–ಅಮೆರಿಕನ್ ಬಾಲಕ ಆತ್ಮಹತ್ಯೆ

Last Updated 15 ಡಿಸೆಂಬರ್ 2022, 2:36 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಇಂಡೊ–ಅಮೆರಿಕನ್ ಬಾಲಕನೊಬ್ಬ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಗೋಲ್ಡನ್ ಗೇಟ್ ಬ್ರಿಡ್ಜ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರ ಕುಟುಂಬ ವರ್ಗ ಮತ್ತು ಅಮೆರಿಕದ ಕರಾವಳಿ ಕಾವಲು ಪಡೆ ತಿಳಿಸಿದೆ.

ಸೇತುವೆಯ ಮೇಲೆ 16 ವರ್ಷದ ಬಾಲಕನ ಸೈಕಲ್, ಫೋನ್ ಮತ್ತು ಬ್ಯಾಗ್ ಪತ್ತೆಯಾಗಿದೆ. ಹನ್ನೆರಡನೇ ತರಗತಿಯ ವಿದ್ಯಾರ್ಥಿ ಸಂಜೆ 4.58ರ ಸುಮಾರಿಗೆ ಸೇತುವೆಯಿಂದ ಜಿಗಿದಿದ್ದಾನೆ.

ಸೇತುವೆಯಿಂದ ಒಬ್ಬರು ಜಿಗಿಯುತ್ತಿರುವುದನ್ನು ನೋಡಿದ ತಕ್ಷಣವೇ ಕಾರ್ಯಾಚರಣೆ ನಡೆಸಿ ಎರಡು ಗಂಟೆಗಳ ಶೋಧ ನಡೆಸಲಾಯಿತು ಎಂದು ಕರಾವಳಿ ಕಾವಲು ಪಡೆ ಸಿಬ್ಬಂದಿ ಹೇಳಿದ್ದಾರೆ.

ಭಾರತೀಯ ಅಮೆರಿಕನ್ ಒಬ್ಬರು ಗೋಲ್ಡನ್ ಬ್ರಿಡ್ಜ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ನಾಲ್ಕನೇ ಘಟನೆ ಇದು ಎಂದು ಸಮುದಾಯದ ಮುಖಂಡ ಅಜಯ್ ಜೈನ್ ಭುಟೋರಿಯಾ ಹೇಳಿದ್ದಾರೆ.

ಕಳೆದ ವರ್ಷ 25 ಜನರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1937ರಲ್ಲಿ ಸೇತುವೆಯನ್ನು ಜನರ ಬಳಕೆಗೆ ತೆರೆದಾಗಿನಿಂದ ಸುಮಾರು 2,000 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಗೋಲ್ಡನ್ ಗೇಟ್ ಸೇತುವೆಯ ಮೇಲಿನ ಆತ್ಮಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ ಬ್ರಿಡ್ಜ್ ರೈಲ್ ಫೌಂಡೇಶನ್ ಹೇಳಿದೆ.

1.7 ಮೈಲಿ ಉದ್ದದ ಸೇತುವೆಯ ಎರಡೂ ಬದಿಯಲ್ಲಿ 20 ಅಡಿ ಅಗಲದ ಕಬ್ಬಿಣದ ತಡೆಗೋಡೆ ರಚಿಸಲು ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಈ ವರ್ಷದ ಜನವರಿಯೊಳಗೆ ಪೂರ್ಣಗೊಳ್ಳಬೇಕಿದ್ದ ಯೋಜನೆಯು ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT