ಜಾಕ್ಸೋನ್ ವಿಲ್ಲೆ(ಫ್ಲಾರಿಡಾ): ಚೀನಾದ ಉದ್ಯಮಿಗಾಗಿ ನಿಯಮ ಮೀರಿ ಬಂದೂಕುಗಳನ್ನು ಖರೀದಿಸಿದ ಫ್ಲಾರಿಡಾ ಮೂಲದ ಅಮೆರಿಕ ನೌಕಾ ಪಡೆಯ ಅಧಿಕಾರಿಯನ್ನು ದೋಷಿ ಎಂದು ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.

ಭದ್ರತಾ ದಾಖಲೆಗಳಲ್ಲಿ ಉದ್ಯಮಿ ಜೊತೆಗಿನ ತಮ್ಮ ನಂಟಿನ ಬಗ್ಗೆಯೂ 36 ವರ್ಷದ ಲೆಫ್ಟಿನೆಂಟ್ ಫಾನ್ ಯಾಂಗ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಬಂದೂಕುಗಳನ್ನು ಖರೀದಿಸಲು ಭದ್ರತಾ ಅನುಮೋದನೆಯ ಪರಿಶೀಲನೆ ಸಂದರ್ಭದಲ್ಲಿ ಅಮೆರಿಕದ ಫೆಡರಲ್ ಪರವಾನಗಿ ಡೀಲರ್‌ಗಳಿಗೆ ತಪ್ಪು ಲಿಖಿತ ಹೇಳಿಕೆ ನೀಡುವ ಮೂಲಕ ಅಮೆರಿಕದ ಬಂದೂಕು ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಚೀನಾ ಮೂಲದ ಅಮೆರಿಕ ಪ್ರಜೆ ಫಾನ್ ಯಾಂಗ್ 30 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇಂದು ನ್ಯಾಯಾಲಯವು ಶಿಕ್ಷೆ ಪ್ರಕಟಿಸಲಿದೆ.

ಅಮೆರಿಕದ ನೌಕಾಧಿಕಾರಿಯಾಗಿ ನೇಮಕವಾಗುವುದಕ್ಕೂ ಮುನ್ನ ಚೀನಾದ ಉದ್ಯಮಿ ಜೆ ಸಂಗ್ಟೋವ್ ಜೊತೆ ಫಾನ್ ಯಾಂಗ್ ಆನ್‌ಲೈನ್ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಬಳಿಕ, 2013ರಲ್ಲಿ ಫಾನ್ ನೌಕಾಪಡೆಯ ವಿಮಾನದ ತರಬೇತಿ ಪಡೆಯುತ್ತಿದ್ದ ಸಂದರ್ಭ ಇಬ್ಬರೂ ಪೆನ್ಸಕೊಲಾದಲ್ಲಿ ಮುಖತಃ ಭೇಟಿಯಾಗಿದ್ದರು.

2016ರಲ್ಲಿ ಫಾನ್ ಯಾಂಗ್ ಜಾಕ್ಸೋನ್ ವಿಲ್ಲೆಯಲ್ಲಿ ಹುದ್ದೆಗೆ ನೇಮಕವಾದಾಗ ಫಾನ್ ಹೆಂಡತಿ ಯಾಂಗ್ ಯಾಂಗ್ ಅವರನ್ನು ಚೀನಾ ಮೂಲದ ತಮ್ಮ ಶಾಂಘೈ ಬ್ರೀಜ್ ಟೆಕ್ನಾಲಜಿ ಕೋ ಕಂಪನಿಗೆ ನೇಮಕ ಮಾಡಿಕೊಳ್ಳುವಂತೆ ಉದ್ಯಮಿ ಜೆ ಸಂಗ್ಟೋವ್ ಶಿಫಾರಸು ಮಾಡಿದ್ದರು ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.