ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಅಲ್ಪಸಂಖ್ಯಾತರ ಸ್ವಾತಂತ್ರ್ಯ: ಅಸಮಾಧಾನ ಹೊರಹಾಕಿದ ಅಮೆರಿಕ ಸಂಸ್ಥೆ

Published 1 ಮೇ 2023, 18:57 IST
Last Updated 1 ಮೇ 2023, 18:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತ ವಿಷಯವನ್ನು ಅಮೆರಿಕದ ಸ್ವಾಯತ್ತ ಸಂಸ್ಥೆಯೊಂದು ಸೋಮವಾರ ಪ್ರಸ್ತಾಪಿಸಿದ್ದು, ಭಾರತವನ್ನು ಕಪ್ಪುಪಟ್ಟಿಗೆ ಸೇರಿಸುವ ಮಾತು ಆಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತಾವಧಿಯಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ಕ್ರಮ ಇನ್ನಷ್ಟು ಹದಗೆಡುತ್ತಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಈ ನಿಲುವು ವ್ಯಕ್ತಪಡಿಸಿದೆ. ತನ್ನ  ಈ ನಿಲುವನ್ನು ದೇಶದ ವಿದೇಶಾಂಗ ಇಲಾಖೆಯೂ ಒಪ್ಪುತ್ತದೆ ಎಂಬ ನಿರೀಕ್ಷೆಯಲ್ಲಿದೆ. 

ವಿವಿಧ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸ್ವಾತಂತ್ರ್ಯ, ಸ್ಥಿತಿ–ಗತಿಯನ್ನು ಪ್ರತಿವರ್ಷ ವಿಮರ್ಶಿಸುವ ವಿದೇಶಾಂಗ ಇಲಾಖೆಯು, ನಿರ್ಬಂಧ ಹೇರುವ ಕುರಿತಂತೆ ದೇಶಗಳ ಹೆಸರನ್ನು ಪಟ್ಟಿ ಮಾಡಲಿದೆ.

ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಭಾರತದ ಉಲ್ಲೇಖವಿದೆ. ಮುಸಲ್ಮಾನರು ಮತ್ತು ಕ್ರೈಸ್ತರನ್ನು ಗುರಿಯಾಗಿಸಿ ಹಿಂಸೆ, ಆಸ್ತಿ ನಷ್ಟ ಹಾಗೂ ಈ ಸಂಬಂಧ ಮೋದಿ ಅವರು ಪ್ರತಿನಿಧಿಸುವ ಬಿಜೆಪಿಯ ಹಲವು ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್‌ಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತವನ್ನು ಗುರಿಯಾಗಿಸಿ ಸಂಸ್ಥೆ ಹೀಗೆ ಶಿಫಾರಸು ಮಾಡುತ್ತಿರುವುದು ಇದು ಸತತ ನಾಲ್ಕನೆಯ ಬಾರಿ. ಭಾರತ ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಆಯೋಗ ತಾರತಮ್ಯ ಧೋರಣೆ ಹೊಂದಿದೆ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT