ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾನಿಕ ದಾಳಿ: ಅಲ್‌–ಖೈದಾ ಮುಖ್ಯಸ್ಥನ ಹತ್ಯೆ

Last Updated 7 ಜನವರಿ 2019, 17:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಯೆಮನ್‌ನಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್‌–ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಜಮಲ್‌ ಅಲ್‌–ಬದ್ವಾಯಿ ಮೃತಪಟ್ಟಿದ್ದಾನೆ.

ಈತ,2000 ನೇ ಇಸವಿಯಲ್ಲಿ ಅಮೆರಿಕ ನೌಕಾ ಪಡೆಯ ಹಡಗಿನ ಮೇಲೆ ನಡೆದ ಆತ್ಮಹತ್ಯಾ ದಾಳಿಯ ಪ್ರಮುಖ ಸಂಚುಕೋರ. ಈ ದಾಳಿಯಲ್ಲಿ ಹದಿನೇಳು ನೌಕಾ ಪಡೆ ಸಿಬ್ಬಂದಿ ಮೃತರಾಗಿದ್ದರು.

ಈತನ ಸುಳಿವು ನೀಡಿದವರಿಗೆ₹ 34.82 ಕೋಟಿ ಬಹುಮಾನವನ್ನು ಅಮೆರಿಕ ಘೋಷಿಸಿತ್ತು.ಈತನ ವಿರುದ್ಧ 50 ಕ್ಕೂ ಹೆಚ್ಚು ಭಯೋತ್ಪಾದನಾ ಪ್ರಕರಣಗಳು ದಾಖಲಾಗಿವೆ.

ಸೇನಾ ಪಡೆಗೆ ಅಭಿನಂದನೆ ಸಲ್ಲಿಸಿರುವಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌,‘ಹೇಡಿಗಳ ದಾಳಿಯಿಂದ ಮೃತರಾದ ನಾಯಕರಿಗೆ ನ್ಯಾಯ ದೊರಕಿದೆ’ ಎಂದಿದ್ದಾರೆ.

‘ನೌಕಾ ದಾಳಿಯ ಒಬ್ಬ ನಾಯಕನನ್ನು ಮಾತ್ರವೇ ಕೊಂದಿದ್ದೇವೆ. ಅಲ್‌–ಖೈದಾ ವಿರುದ್ಧದ ನಮ್ಮ ಹೋರಾಟ ನಿರಂತರ. ಇಸ್ಲಾಮಿಕ್‌ ಉಗ್ರ ಸಂಘಟನೆ ವಿರುದ್ಧದ ಹೋರಾಟ ಎಂದಿಗೂ ನಿಲ್ಲುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT