ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಕ್ಸಿಕೊ: ಪ್ರಚಾರ ಅಂತ್ಯ, ಅಲ್ಲಲ್ಲಿ ಹಿಂಸಾಚಾರ

Published 30 ಮೇ 2024, 16:19 IST
Last Updated 30 ಮೇ 2024, 16:19 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ಮೆಕ್ಸಿಕೊದಲ್ಲಿ ಭಾನುವಾರ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯ ಮುಕ್ತಾಯಗೊಂಡ ಬುಧವಾರ ದೇಶದ ವಿವಿಧೆಡೆ ಹಿಂಸಾಚಾರ ಘಟನೆಗಳು ನಡೆದಿವೆ.

ಕೆಲವೆಡೆ ಅಭ್ಯರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆಗಳು ವರದಿಯಾಗಿವೆ. ದಕ್ಷಿಣದ ಗುಯೆರೆರೊ ನಗರದ ಮೇಯರ್‌ ಸ್ಥಾನದ ಅಭ್ಯರ್ಥಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಪಶ್ಚಿಮದಲ್ಲಿರುವ ಜಲಿಸ್ಕೊ ರಾಜ್ಯದ ಮೇಯರ್‌ ಅಭ್ಯರ್ಥಿ ಮೇಲೆ ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಭಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೆಕ್ಸಿಕೊ ನಗರದ ಹೊರವಲಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೊರೆನಾ ಪಕ್ಷದ ಶೊಚಿದಲ್ ಗಾಲ್ವೆಜ್‌, ಅಧ್ಯಕ್ಷ ಆಂಡ್ರೆ ಮ್ಯಾನ್ಯುಯೆಲ್ ಲೋಪೆಜ್‌ ಒಬ್ರಡಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಡ್ರಗ್ಸ್‌ ಜಾಲವನ್ನು ಮಟ್ಟ ಹಾಕುವ ಬದಲು, ಅಧ್ಯಕ್ಷ ಒಬ್ರಡಾರ್‌ ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮೊರೆನಾ ಪಕ್ಷದ ಕ್ಲಾಡಿಯಾ ಶೀನ್‌ಬಾಮ್ ಅವರು ಒಬ್ರಡಾರ್ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕ್ಲಾಡಿಯಾ ಅವರು ಮೆಕ್ಸಿಕೊ ನಗರದ ಮಾಜಿ ಮೇಯರ್.

‘ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಡ್ರಗ್ಸ್‌ ಜಾಲವನ್ನು ಮಟ್ಟ ಹಾಕಲಾಗುವುದು. ಯುವ ಜನತೆಗೆ ವೃತ್ತಿ ಶಿಕ್ಷಣ ತರಬೇತಿ ನೀಡಲಾಗುವುದು’ ಎಂದು ಶೀನ್‌ಬಾಮ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT