ಆಫ್ಘಾನಿಸ್ತಾನದಲ್ಲಿ ಐಎಸ್ ಚಟುವಟಿಕೆ ಹೆಚ್ಚುತ್ತಿದ್ದು, ಪ್ರಾದೇಶಿಕವಾಗಿ ನೆರೆ ದೇಶಗಳಾದ ರಷ್ಯಾ, ಚೀನಾಕ್ಕೆ ಭೀತಿ ಮೂಡಿದೆ. ಈಗಾಗಲೇ ಸಾವಿರಾರು ಉಗ್ರರು ಸಿರಿಯಾ ಮೂಲಕ ಆಫ್ಘನ್ ಗಡಿ ಪ್ರವೇಶಿಸಿರುವ ಬಗ್ಗೆ ವರದಿಗಳಿದ್ದು, ಇದು ಆ ದೇಶವನ್ನು ಇನ್ನಷ್ಟು ಅಸ್ಥಿರಗೊಳಿಸುವ ಅಪಾಯವಿದೆ. ಚೀನಾ, ರಷ್ಯಾಗಳನ್ನು ಹತ್ತಿಕ್ಕುವುದು ಹಾಗೂ ತನ್ನ ಹಿತಾಸಕ್ತಿ ಕಾಯ್ದುಕೊಳ್ಳುವ ಉದ್ದೇಶದಿಂದ ಐಎಸ್ ಅನ್ನು ಅಮೆರಿಕವು ಗುರಾಣಿ ರೀತಿ ಬಳಸಿಕೊಳ್ಳುತ್ತಿದೆ ಎಂಬ ಸಂಶಯವೂ ಇದೆ.