ಇಸ್ಲಾಮಾಬಾದ್, (ಪಿಟಿಐ): ಈದ್- ಉಲ್- ಫಿತರ್ ಆಚರಣೆಗೆಂದು ವಿಹಾರಕ್ಕೆ ತೆರಳಿದ್ದ ಪಾಕಿಸ್ತಾನದ ಬಜೌರ್ ಗುಡ್ಡಗಾಡು ಪ್ರದೇಶದ 40 ಬಾಲಕರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಲಕರು 12-18 ವರ್ಷದವರಾಗಿದ್ದು ಗುರುವಾರ ಆಕಸ್ಮಿಕವಾಗಿ ಆಫ್ಘಾನಿಸ್ತಾನದ ಪೂರ್ವ ಕುನಾರ್ ಪ್ರಾಂತ್ಯದ ಗಡಿ ದಾಟಿದಾಗ ಈ ಘಟನೆ ನಡೆದಿದೆ.
ಬಾಲಕರ ಸಂಖ್ಯೆಯ ಬಗ್ಗೆ ಗೊಂದಲವಿದ್ದು ಕೆಲವು ಟಿವಿ ವಾಹಿನಿಗಳು 40 ಎಂದು ವರದಿ ಮಾಡಿದ್ದರೆ ಮತ್ತೆ ಕೆಲವರು 30 ಎಂದು ಹೇಳುತ್ತಿದ್ದಾರೆ.
ಉಗ್ರರ ಯಾವ ಗುಂಪು ಬಾಲಕರನ್ನು ಒತ್ತೆಯಾಗಿಟ್ಟುಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಬಜಾಜಪುರ ಮೂಲದ `ತೆಹ್ರಿಕ್-ಎ- ತಾಲಿಬಾನ್ ಪಾಕಿಸ್ತಾನ~ ಎಂಬ ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಮೌಲ್ವಿ ಫಕೀರ್ ಎಂಬಾತ ಕುನಾರ್ನಿಂದ ಈಗ ಇದರ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಪಾಕ್ ಸೇನೆ ಹೇಳಿದೆ.
ಈ ಬಾಲಕರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ವಿಫಲರಾದರೆ ಉಗ್ರರು ಅವರನ್ನು ಆತ್ಮಾಹುತಿ ಬಾಂಬ್ ದಾಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಟಿವಿಯೊಂದು ವರದಿ ಮಾಡಿದೆ.