‘ನಿಕಟ ಸಂಬಂಧಿಗಳು’ ಯಾರು ಎಂಬ ಬಗ್ಗೆ ಅಮೆರಿಕ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸಂಕುಚಿತವಾಗಿವೆ ಎಂಬ ಹವಾಯಿಯ ಫೆಡರಲ್ ನ್ಯಾಯಾಧೀಶರ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಆದರೆ, ‘ಅಜ್ಜ–ಅಜ್ಜಿ, ಮೊಮ್ಮಕ್ಕಳು, ಅಳಿಯ, ಸೊಸೆ, ಚಿಕ್ಕಪ್ಪ, ಚಿಕ್ಕಮ್ಮ (ಆಂಟ್, ಅಂಕಲ್), ಸೋದರಳಿಯ, ಸೋದರ ಸಂಬಂಧಿಗಳು ಹಾಗೂ ಸೋದರರು ಈ ಮಾನದಂಡಕ್ಕೆ ಒಳಪಡಲಿದ್ದಾರೆ’ ಎಂದು ಫೆಡರಲ್ ಕೋರ್ಟ್ ನೀಡಿದ್ದ ವಿವರಣೆಯನ್ನು ಕೋರ್ಟ್ ಸಂಪೂರ್ಣ ಒಪ್ಪಿಲ್ಲ. ಆದೇಶದ ಕೆಲವು ಭಾಗಗಳಿಗೆ ತಡೆ ನೀಡಿದೆ.