ಕೌಲಾಲಂಪುರ (ಪಿಟಿಐ): ಹಿಂದೂ ಮಹಾಸಾಗರದಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ‘ಬೋಯಿಂಗ್ 777’ ವಿಮಾನಕ್ಕೆ ಸೇರಿದ್ದಾಗಿವೆ ಎನ್ನಲಾಗಿದೆ.
ಕಳೆದ ವರ್ಷ ನಾಪತ್ತೆಯಾಗಿರುವ ಮಲೇಷ್ಯಾದ ಎಂಎಚ್ 370 ವಿಮಾನ ಹಾಗೂ ಬೋಯಿಂಗ್ 777 ವಿಮಾನದ ಸಾಮ್ಯತೆಗಳಿರುವ ಅವಶೇಷಗಳು ರಿಯೋನೊ ದ್ವೀಪದಲ್ಲಿ ಪತ್ತೆಯಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಈ ಅವಶೇಷಗಳು ಬೋಯಿಂಗ್ 777 ವಿಮಾನದ್ದಾಗಿವೆ ಎನ್ನಲಾಗಿದೆ. ಇವು ಎಂಎಚ್ 370 ವಿಮಾನಕ್ಕೆ ಸೇರಿರುವ ಅವಶೇಷಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞರ ತಂಡಕ್ಕೆ ಸೂಚಿಸಿದ್ದು, ಅವುಗಳನ್ನು ಫ್ರಾನ್ಸ್ಗೆ ಕಳುಹಿಸಲಾಗಿದೆ ಎಂದು ಮಲೇಷ್ಯಾದ ಪ್ರಧಾನಿ ನಜೀಬ್ ರಜಾಕ್ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ.