ಸ್ಕಾಟ್ಲೆಂಡ್ ಸ್ಥಳೀಯ ಸರ್ಕಾರ ಬ್ರಿಟನ್ನಲ್ಲೇ ಉಳಿಯಬೇಕೇ ಅಥವಾ ಪ್ರತ್ಯೇಕ ರಾಷ್ಟ್ರವಾಗಿ ಹೊರ ಹೋಗಬೇಕೇ ಎಂದು ನಿರ್ಧರಿಸಲು ಮತದಾನದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು 36 ಕೌನ್ಸಿಲ್ಗಳಲ್ಲಿ ಜನರು ಮತದಾನ ಮಾಡುವ ಮೂಲಕ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಬ್ರಿಟನ್ ಜೊತೆಗೆ ಇರಬೇಕೆಂದು ಬಯಸಿ 1,877,252 ಜನರ ಮತ ಚಲಾಯಿಸಿದ್ದಾರೆ. ಜನರ ತೀರ್ಪಿನಿಂದಾಗಿ 1707ರಲ್ಲಿ ಬ್ರಿಟನ್ ಸೇರಿದ್ದ ಸ್ಕಾಟ್ಲೆಂಡ್ ಹಾಗೆಯೇ ಮುಂದುವರೆಯಲಿದೆ ಎಂದು ಅಲ್ಲಿನ ಸ್ಥಳೀಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ಸ್ಕಾಟ್ಲೆಂಡ್ನಲ್ಲಿ ನಡೆದಿದ್ದ ಪ್ರತ್ಯೇಕತೆಯ ಅಭಿಯಾನಕ್ಕೆ ಹಿನ್ನಡೆಯಾಗಿದೆ.