ಫ್ರ್ಯಾಂಕ್ಫರ್ಟ್ ಅಮ್ ಮೇನ್, ಜರ್ಮನಿ (ಎಎಫ್ಪಿ): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಬ್ಬಂದಿ ಮುಷ್ಕರ ನಡೆಸಲಿರುವ ಕಾರಣ ಮಂಗಳವಾರ 800ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗುವುದು ಎಂದು ಜರ್ಮನಿಯ ವಿಮಾನಯಾನ ಸಂಸ್ಥೆ ‘ಲುಫ್ತಾನ್ಸಾ’ ತಿಳಿಸಿದೆ.
‘1600 ವಿಮಾನಗಳ ಪೈಕಿ 800 ವಿಮಾನಗಳ ಹಾರಾಟ ರದ್ದುಪಡಿಸಲಾಗುವುದು. ಇದರಿಂದಾಗಿ 90 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೆ ಸಿಲುಕಲಿದ್ದಾರೆ. ಬುಧವಾರದಿಂದ ಎಂದಿನಂತೆ ವಿಮಾನಗಳ ಸೇವೆ ಮುಂದುವರಿಯಲಿದೆ’ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.