ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ವೀಕ್ಷಕರನ್ನು ಗುರಿಯಾಗಿಸಿ ದಾಳಿ ಆರೋಪದಲ್ಲಿ ಹುರುಳಿಲ್ಲ

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ : ಗಡಿ ನಿಯಂತ್ರಣ ರೇಖೆ ಬಳಿ ವಿಶ್ವಸಂಸ್ಥೆಯ ಸೇನಾ ವೀಕ್ಷಕರನ್ನು ಗುರಿಯಾಗಿಸಿ ಭಾರತದ ಪಡೆಗಳು ದಾಳಿ ನಡೆಸಿವೆ ಎಂಬ ಪಾಕಿಸ್ತಾನ ಆರೋಪವನ್ನು ವಿಶ್ವಸಂಸ್ಥೆ ತಳ್ಳಿಹಾಕಿದೆ.

‘ಪಾಕಿಸ್ತಾನದ ಆಡಳಿತವಿರುವ  ಕಾಶ್ಮೀರದ ಭಿಂಬರ್ ಜಿಲ್ಲೆಯಲ್ಲಿ ಸಂಚರಿಸುವಾಗ ವೀಕ್ಷಕರ ತಂಡವು ಗುಂಡಿನ ಸದ್ದನ್ನು ಕೇಳಿಸಿಕೊಂಡಿದೆ. ಆದರೆ ಈ ತಂಡವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎಂಬುದಕ್ಕೆ ಪುರಾವೆಗಳಿಲ್ಲ. ತಂಡದ ಸದಸ್ಯರಿಗೆ ಏನೂ ಹಾನಿಯಾಗಿಲ್ಲ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ಅವರ ವಕ್ತಾರ ಸ್ಟೆಫಾನ್ ದುಜಾರಿಕ್ ಬುಧವಾರ ಹೇಳಿದ್ದಾರೆ.

‘ಕಾಶ್ಮೀರ ವಿಚಾರದಲ್ಲಿ ನಮಗೆ ಕಾಳಜಿ ಇದೆ. ನಾವು ಹತ್ತಿರದಿಂದ ಗಮನಿಸುತ್ತಿರುವ ಅಂಶಗಳಲ್ಲಿ ಇದೂ ಒಂದು’ ಎಂದು ಅವರು ತಿಳಿಸಿದ್ದಾರೆ.
ಸೇನಾ ವೀಕ್ಷಕರ ತಂಡದ ಇಬ್ಬರು ಸದಸ್ಯರಿದ್ದ ವಾಹನವು ಗಡಿ ನಿಯಂತ್ರಣ ರೇಖೆ ಬಳಿ ಸಂಚರಿಸುತ್ತಿದ್ದಾಗ ಭಾರತದ ಸೇನೆಯು ಗುಂಡಿನ ದಾಳಿ ನಡೆಸಿದೆ ಎಂಬ ಪಾಕ್ ಸೇನಾಪಡೆಯ ಮಾಧ್ಯಮ ವಿಭಾಗದ ಹೇಳಿಕೆಯನ್ನು ಉಲ್ಲೇಖಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT