ವಾಷಿಂಗ್ಟನ್(ಐಎಎನ್ಎಸ್): ‘ಉಕ್ರೇನ್ನ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಅಮೆರಿಕ ಎದುರು ನೋಡುತ್ತಿದೆ’ ಎಂದು ಬರಾಕ್ ಒಬಾಮ ಹೇಳಿದ್ದಾರೆ. ದೇಶದ ಪ್ರಮುಖ ಸುಧಾರಣೆಗಳ ಜಾರಿಗೆ ಬೆಂಬಲ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.
‘ದೇಶವನ್ನು ಒಗ್ಗೂಡಿಸುವ ಮತ್ತು ಎಲ್ಲ ನಾಗರಿಕರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಚುನಾವಣೆಯು ಉಕ್ರೇನ್ ಸರ್ಕಾರ ಇರಿಸಿದ ಮಹತ್ವದ ಹೆಜ್ಜೆಯಾಗಿದೆ’ ಎಂದು ಒಬಾಮ ಹೇಳಿರುವುದನ್ನು ಕ್ಸಿನ್ಹುವಾ ವರದಿ ಮಾಡಿದೆ.