ಅವಳ ‘ನಿಲುವಂಗಿಯ ಕನಸು’

7

ಅವಳ ‘ನಿಲುವಂಗಿಯ ಕನಸು’

Published:
Updated:
Prajavani

ನೈಟಿ ಅನ್ನುವುದು ನಗರವಾಸಿ ಮಹಿಳೆಯರಿಗೆ ಸುಲಭವಾಗಿ ಕೈದಕ್ಕುವಂಥದ್ದು. ಆದರೆ, ಅಂಥ ಸರಳ ಆಸೆಯನ್ನೂ ಈಡೇರಿಸಿಕೊಳ್ಳಲಾಗದ ಸ್ಥಿತಿ ರೈತ ಮಹಿಳೆ ಸೀತಾಳದ್ದು. ಮಲೆನಾಡಿನ ಹಳ್ಳಿಯೊಂದರಲ್ಲಿ ಬೆಳೆದ ಸೀತಾ, ಪಟ್ಟಣದ ಸಂಬಂಧಿಕರ ಮನೆಗೆ ಬಂದಾಗ ಆ ಮನೆಯೊಡತಿ ನೈಟಿ ಧರಿಸಿರುತ್ತಾಳೆ. ಅದನ್ನು ನೋಡಿ ಪುಳಕಿತಗೊಳ್ಳುವ ಸೀತಾಳಿಗೆ ತಾನೂ ಅದನ್ನು ಖರೀದಿಸಿ ಧರಿಸಬೇಕೆಂಬ ಬಯಕೆ ಮೂಡುತ್ತದೆ. ಸೀತಾಳ ಆಸೆಯನ್ನು ಆಕೆಯ ಗಂಡ, ರೈತ ಚಿನ್ನಪ್ಪ ಈಡೇರಿಸುತ್ತಾನೆಯೇ? ಅದಕ್ಕೆ ಎದುರಾಗುವ ಅಡ್ಡಿಆತಂಕಗಳೇನು ಎಂಬುದನ್ನು ಕಟ್ಟಿಕೊಟ್ಟುತ್ತದೆ ‘ನಿಲವಂಗಿಯ ಕನಸು’ ನಾಟಕ.

ರೈತರನ್ನು ‘ನೇಗಿಲ ಯೋಗಿ’ ಎಂದು ಕರೆದವರು ರಾಷ್ಟ್ರಕವಿ ಕುವೆಂಪು. ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ರೈತನ ಉಳುವ ಕಲೆಗೆ ಧ್ಯಾನದ ಮೌಲ್ಯ ದಕ್ಕಿದರೂ ರೈತನ ಸ್ಥಿತಿ ಮಾತ್ರ ಬದಲಾಗಲಿಲ್ಲ. ಅಂಥ ರೈತ ಕುಟುಂಬದ ಕಥೆ ಹೇಳುತ್ತದೆ ಈ ನಾಟಕ. ರೈತ ಮಹಿಳೆ ಸೀತೆ ಮತ್ತು ಆಕೆಯ ರೈತ ಕುಟುಂಬದ ಸುತ್ತ ಹೆಣೆಯಲಾಗಿರುವ ಈ ಕಥೆಯಲ್ಲಿ ಇಡೀ ಸಮಾಜದ ಬಿಂಬವೇ ಅಡಗಿದೆ. ಮೂವತ್ತು ವರ್ಷಗಳ ಹಿಂದಿನ ಹಿರಿಯ ತಲೆಮಾರು ಮತ್ತು ಇಂದಿನ ಯುವ ತಲೆಮಾರುಗಳ ನಡುವಿನ ವೈರುಧ್ಯಗಳ ಚರ್ಚೆಯೂ ಇಲ್ಲಿದೆ.

ಹಾಡ್ಲಹಳ್ಳಿ ನಾಗರಾಜ್ ಅವರ ‘ನಿಲುವಂಗಿಯ ಕನಸು’ ಕಾದಂಬರಿಯನ್ನು ಅದೇ ಶೀರ್ಷಿಕೆಯಡಿ ರಂಗರೂಪಕ್ಕೆ ತಂದಿದ್ದಾರೆ ರಂಗಕರ್ಮಿ ರಕ್ಷಿದಿ ಪ್ರಸಾದ್. ನಾಟಕಕ್ಕೆ ಉಲಿವಾಲ ಮೋಹನ್‌ಕುಮಾರ್ ಅವರ ನಿರ್ದೇಶನವಿದೆ. ಚಲಂ ಹಾಡ್ಲಹಳ್ಳಿ ಅವರು ರಚಿಸಿರುವ ಗೀತೆಗಳಿಗೆ ರಘುನಂದನ್ ಅವರ ಸಂಗೀತ ನಿರ್ದೇಶನವಿದೆ. ಬೆಳಕು ವಿನ್ಯಾಸ ವಿ.ಆರ್. ಕಾರ್ಪೆಂಟರ್ ಅವರದ್ದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !