ಮಂಗಳವಾರ, ಮೇ 18, 2021
24 °C

ರಫೇಲ್‌: ಯುಪಿಎ ಅವಧಿಯಲ್ಲಿ ಯಾವುದೇ ಒಪ್ಪಂದವಾಗಿರಲಿಲ್ಲ- ರಕ್ಷಣಾ ಸಚಿವೆ ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧಿಸಿ ಯುಪಿಎ ಸರ್ಕಾರದ ಅವಧಿಯಲ್ಲಿ ಯಾವುದೇ ಒಪ್ಪಂದ ಆಗಿರಲಿಲ್ಲ. ನಮ್ಮ ಅವಧಿಯಲ್ಲಿ ಒಪ್ಪಂದ ಮಾಡಿಕೊಂಡು ವ್ಯವಹರಿಸಿದ್ದೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಯಲಹಂಕದ ವಾಯುನೆಲೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ನಡೆದಿರುವ ರಫೇಲ್‌ ಒಪ್ಪಂದ ಅತ್ಯುತ್ತಮವಾಗಿದೆ. ಆದರೆ, ಕಾಂಗ್ರೆಸ್‌ ತೀರಾ ಹತಾಶೆಗೊಂಡು ಬೇಜವಾಬ್ದಾರಿಯುತವಾಗಿ ಮಾತನಾಡುತ್ತಿದೆ ಎಂದು ಕಿಡಿ ಕಾರಿದ ಅವರು, ಸರ್ಕಾರಗಳ ನಡುವೆ ಖರೀದಿ ಒಪ್ಪಂದವಾಗಿದೆಯೇ ವಿಮಾನ ಕಂಪೆನಿಗಳ ಆಯ್ಕೆ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿಲ್ಲ. ನಾನು ಈ ಖರೀದಿ ಒಪ್ಪಂದವನ್ನು ಎಚ್‌ಎಎಲ್‌ ಬದಲಾಗಿ ಡಸ್ಸೋ ಕಂಪೆನಿಗೆ ವರ್ಗಾಯಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದರು.

ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಮಧಿಸಿದಂತೆ ಕಾಂಗ್ರೆಸ್‌ ಹತಾಶ ಹೇಳಿಕೆ ನೀಡುತ್ತಿದೆ. ಅದು ಹೇಳುವುದೆಲ್ಲವೂ ಅರ್ಧ ಸತ್ಯ. ಅಧಿಕಾರದಲ್ಲಿರುವಾಗ ಎಚ್‌ಎಎಲ್‌ನ್ನು ಬಲಪಡಿಸುವ ಕುರಿತು ಮನಸ್ಸು ಮಾಡದವರು ಈಗ ಆ ಸಂಸ್ಥೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯುಪಿಎ ಅವಧಿಯಲ್ಲಿ ಎಚ್‌ಎಎಲ್‌ ವಾರ್ಷಿಕ 8 ತೇಜಸ್‌ ವಿಮಾನಗಳನ್ನು ಉತ್ಪಾದಿಸುತ್ತಿತ್ತು. ಈಗ ಅದರ ಸಾಮರ್ಥ್ಯವನ್ನು 16ಕ್ಕೆ ಏರಿಸಿದ್ದೇವೆ. 40 ಎಲ್‌ಸಿಎಗೆ ಬೇಡಿಕೆ ಬಂದಿದೆ. 83 ತೇಜಸ್‌ ಯುದ್ಧ ವಿಮಾನ ತಯಾರಿಕೆಗೆ ಆದೇಶ ಕೊಟ್ಟಿದ್ದೇವೆ. ₹ 20 ಸಾವಿರ ಕೋಟಿ ಅನುದಾನವನ್ನೂ ಕೊಟ್ಟಿದ್ದೇವೆ ಎಂದು ಅವರು ಹೇಳಿದರು.

ರಕ್ಷಣಾ ಇಲಾಖೆ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಆರೋಪ ಇಲ್ಲ. ಏನೂ ಸಿಗದೇ ಕಾಂಗ್ರೆಸ್‌ನವರು ಹತಾಶ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು