`ಸ್ವಂತ ಮನೆ~ ಯಾರಿಗೆ ಬೇಡ ಹೇಳಿ?
ದೇಶದ ರಾಜಧಾನಿ, ಮಹಾ ನಗರ, ಚಿಕ್ಕ ನಗರ, ಪಟ್ಟಣ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ, ಹಳ್ಳಿ... ಎಲ್ಲೆಲ್ಲಿಯೂ ಮನೆಗಳಿಗೆ ಬೇಡಿಕೆ ಇದ್ದೇ ಇದೆ.
`ಎಲ್ಲಿಯಾದರೂ ಸರಿ, ಎಂತಹುದಾದರೂ ಸರಿ, ಒಂದು ಕೋಣೆಯದೋ, ಎರಡು ರೂಮಿನದ್ದೋ, ತಾರಸಿಯದೋ, ಮಂಗಳೂರು ಹೆಂಚಿನದೋ, ಚಿಕ್ಕದೋ, ದೊಡ್ಡದೋ.... ಸ್ವಂತಕ್ಕೆ ಒಂದು ಮನೆ ಇರಬೇಕು.

ನಮ್ಮ ಪಾಲಿಗೆ ಅದೇ ದೊಡ್ಡ ಆಸ್ತಿ~... ಎಂದುಕೊಳ್ಳುತ್ತಿದ್ದ ಕಾಲ ಹಿಂದೆ ಇತ್ತು. ಅಂದರೆ? ಈಗ ಅಂತಹ ಮನಸ್ಥಿತಿ ಜನರಲ್ಲಿ ಇಲ್ಲ ಎಂದು ಅರ್ಥ!

ಕಾಲ ಬದಲಾಗಿದೆ, ಜನರೂ ಬದಲಾಗಿದ್ದಾರೆ. ಜನರ ಆಸೆ, ಬೇಡಿಕೆ, ಅದರ ಸ್ವರೂಪವೂ ಬದಲಾಗಿದೆ.ಹೊಸ ಬಟ್ಟೆ ಬೇಕೆಂದರೂ ಎಂತಹುದೋ ಒಂದನ್ನು ಖರೀದಿಸಲು ಈಗ ಜನ ಸಿದ್ಧರಿಲ್ಲ. ಹತ್ತಾರು ಅಂಗಡಿ ಅಲೆದು, ಇಷ್ಟದ ಬಣ್ಣ, ವಿನ್ಯಾಸದ ಬಟ್ಟೆಯನ್ನು ಖರೀದಿಸಿದರಷ್ಟೇ ಅವರಿಗೆ ಸಮಾಧಾನ. ಮಹಿಳೆಯರು, ಯುವಜನರ ವಿಚಾರದಲ್ಲಿ ಇದು ನೂರಕ್ಕೆ ಇನ್ನೂರರಷ್ಟು ನಿಜ.

ಒಡವೆ ವಿಚಾರಕ್ಕೆ ಬಂದರಂತೂ ಇಡೀ ನಗರದಲ್ಲಿರುವ ಚಿನ್ನದ ಅಂಗಡಿಗಳನ್ನೆಲ್ಲಾ ಎಡತಾಕಿ, ಕಣ್ಣಿಗೆ ಚೆಂದ ಕಂಡಿದ್ದನ್ನೆಲ್ಲಾ ಹೊರಕ್ಕೆ ತೆಗಿಸಿ, ಮೈಮೇಲೆ ಧರಿಸಿ ಕನ್ನಡಿಯಲ್ಲಿ ಇಣುಕಿ ನೋಡಿ, ಸಮಾಧಾನವಾಗದಿದ್ದರೆ ಮತ್ತೊಂದು ಅಂಗಡಿ ಅರಸುತ್ತಾ ಹೋಗುವವರ ಸಂಖ್ಯೆ ಹೆಚ್ಚೇ ಇದೆ.

ಇನ್ನು, ಜೀವಮಾನದಲ್ಲಿ ಒಂದು ಸಾರಿಯಷ್ಟೇ ಎಂಬಂತಹ ಖರೀದಿಯಾದ `ಸ್ವಂತ ಮನೆ~ ವಿಚಾರಕ್ಕೆ ಬಂದರೆ ಜನರ ಹುಡುಕಾಟ, ಪರಿಶೀಲನೆ, ಆಯ್ಕೆ ಇನ್ನೂ ಹೆಚ್ಚೇ ಎನ್ನುವುದು ಶೇ 100ರಷ್ಟು ನಿಜ. ಇದೇ ವಿಚಾರವಾಗಿ ಚಿಂತಾಕ್ರಾಂತವಾಗಿದ್ದ ದೇಶದ ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿಯೇ `ಮಕಾನ್.ಕಾಂ~ 2011ರಲ್ಲಿ ದೇಶದಾದ್ಯಂತ ಸಮೀಕ್ಷೆ ನಡೆಸಿತು.

`2012ರಲ್ಲಿ ಸ್ವಂತ ಮನೆ ಖರೀದಿಸುವುದಾದರೆ ಎಲ್ಲಿ, ಯಾವ ರೀತಿಯ, ಎಷ್ಟು ಕೊಠಡಿಗಳಿರುವ, ಯಾವ ಬಗೆಯ(ಇಂಡಿಪೆಂಡೆಂಟ್ ಅಥವಾ ಫ್ಲಾಟ್?) ಹಾಗೂ ಯಾವ ಕಾರಣಕ್ಕಾಗಿ(ಹೂಡಿಕೆಗಾಗಿಯೋ-ಸ್ವಂತ ವಾಸಕ್ಕೋ?), ಯಾವ ಹಂತದಲ್ಲಿ (ಪೂರ್ಣಗೊಂಡ ಮನೆಯೋ-ನಿರ್ಮಾಣ ಹಂತದಲ್ಲಿರುವುದೋ?) ಎಂಬ ಹತ್ತು ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಬಹು ವಿಸ್ತಾರವಾದ ಸಮೀಕ್ಷೆ ನಡೆಸಿತು.

ಈ ಸಮೀಕ್ಷೆಗೆ ಇನ್ನೊಂದು ಪ್ರಬಲ ಕಾರಣವೂ ಇದ್ದಿತು. 2008ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಭಾರತದ ರಿಯಲ್ ಎಸ್ಟೇಟ್ ಉದ್ಯಮವೂ ಬೇಡಿಕೆ ಕಳೆದುಕೊಂಡಿತ್ತು, ಸಾಲದ ಭಾರದಲ್ಲಿ ಸ್ವಲ್ಪ ಸಂಕಷ್ಟಕ್ಕೂ ಒಳಗಾಗಿತ್ತು. ಮಹಾ ನಗರಗಳಲ್ಲಿನ ದೊಡ್ಡ ವಸತಿ ಸಂಕೀರ್ಣಗಳಲ್ಲಿ ಬಹಳಷ್ಟು ಫ್ಲಾಟ್ಗಳು ಮಾರಾಟವಾಗದೇ ದೀರ್ಘ ಕಾಲ ಉಳಿದುಕೊಂಡಿದ್ದವು.

ನಿರ್ಮಾಣಕಾರರಿಗೆ ತಲೆನೋವನ್ನೂ ತರಿಸಿದ್ದವು.ಕಳೆದೊಂದು ವರ್ಷದಿಂದ ರಿಯಲ್ ಎಸ್ಟೇಟ್ ಉದ್ಯಮ ತುಸು ಚೇತರಿಸಿಕೊಂಡಿದೆ. ಹಾಗಿದ್ದೂ, ಜನರಿಗೆ ಎಂಥ ಮನೆ ಬೇಕು, ಎಲ್ಲಿ ಬೇಕು, ಯಾವ ರೀತಿಯಲ್ಲಿ ಬೇಕು? ಇತ್ಯಾದಿ ಪ್ರಶ್ನೆಗಳು ಉದ್ಯಮವನ್ನು ಕಾಡುತ್ತಲೇ ಇದ್ದವು. ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನವೂ ಈ ಸಮೀಕ್ಷೆಯಲ್ಲಿತ್ತು.

www.makaan.com/2012 ಆನ್ಲೈನ್ ಮೂಲಕ 2011ರ ನವೆಂಬರ್ 27ರಿಂದ ಡಿಸೆಂಬರ್ 15ರವರೆಗೂ ಸಮೀಕ್ಷೆ ನಡೆಸಿತು. ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್, ಪುಣೆ, ಕೋಲ್ಕತ, ಅಹಮದಾಬಾದ್, ಚಂಡೀಗಢ ಮತ್ತಿತರೆಡೆಯ 4430 ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪುರುಷರು, 26ರಿಂದ 45 ವರ್ಷ ವಯೋಮಾನದವರು.

ಸ್ವಂತ ವಾಸಕ್ಕಾಗಿ
ಇವರಲ್ಲಿ ಶೇ 70ರಷ್ಟು ಮಂದಿ `ಸ್ವಂತ ವಾಸ~ಕ್ಕಾಗಿ ಮನೆ ಖರೀದಿಗೆ ಇಚ್ಛಿಸಿದ್ದರೆ, ಶೇ 20 ಮಂದಿ ದೀರ್ಘ ಕಾಲದ ಹೂಡಿಕೆಗಾಗಿ(ಬಾಡಿಗೆಗೆ ಮನೆ ನೀಡುವುದರಿಂದ ಆದಾಯ ಗಳಿಸಬಹುದು), ಶೇ 10ರಷ್ಟು ಜನರು 1ರಿಂದ 3 ವರ್ಷ ಅವಧಿಯ ಅಲ್ಪಾವಧಿ ಹೂಡಿಕೆ ಲೆಕ್ಕಕ್ಕೂ(ಇವರು ಬೆಲೆ ಕಡಿಮೆ ಇದ್ದಾಗ ಮನೆ ಖರೀದಿಸಿ ಬೆಲೆ ಏರಿದಾಗ ಮಾರಾಟ ಮಾಡಿ ಲಾಭ ಗಳಿಸುವ ಆಲೋಚನೆಯವರು) ಖರೀದಿಸಲು ಇಚ್ಛಿಸುವುದಾಗಿ ಉತ್ತರಿಸಿದ್ದರು
`ಬಜೆಟ್ ಮಿತಿ~

ಸಮೀಕ್ಷೆಯಲ್ಲಿ ಮುಖ್ಯವಾಗಿ ಕಂಡುಬಂದ ಸಂಗತಿ ಎಂದರೆ, `ಬಜೆಟ್ ಮಿತಿ~. ತಮಗೆ ರೂ. 40 ಲಕ್ಷದೊಳಗಿನ ಬೆಲೆಯ `ಬಜೆಟ್ ಮಿತಿಯ ಮನೆ~ಯೇ ಸಾಕು ಎಂಬುದು ಶೇ 72 ಮಂದಿಯ ಆಯ್ಕೆಯಾಗಿದ್ದಿತು. ಶೇ 19 ಮಂದಿ ರೂ. 40ರಿಂದ 75 ಲಕ್ಷದವರೆಗಿನ ಮಧ್ಯಮ ದರ್ಜೆಯ ಮನೆಗೂ, ಶೇ 6 ಮಂದಿ ಮೇಲ್ದರ್ಜೆಯ ಗೃಹಗಳಿಗೆ ರೂ. 75 ಲಕ್ಷದಿಂದ 1 ಕೋಟಿವರೆಗೂ ಹಣ ವಿನಿಯೋಜಿಸಲು ಸಿದ್ಧರಿದ್ದರು.

ಆದರೆ, ಕೋಟಿ ರೂಪಾಯಿಯ ಗಡಿ ದಾಟಿ 2 ಕೋಟಿವರೆಗೂ ಅದ್ದೂರಿ ಬಂಗಲೆಗಳ ಖರೀದಿಗೆ ಸಿದ್ಧ ಎಂದವರು ಕೇವಲ ಶೇ 2ರಷ್ಟು ಮಂದಿ. ಶೇ 1ರಷ್ಟು ಜನರ ಆಯ್ಕೆ ಅತಿ ಶ್ರೀಮಂತಿಕೆಯ, ವೈಭವದ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬೃಹತ್ ಬಂಗಲೆ ಖರೀದಿಗಾಗಿ ರೂ. 2 ಕೋಟಿಗೆ ಹೆಚ್ಚು ಹಣ ತೆರಲು ಸಿದ್ಧರಿದ್ದರು.

`ಮುಂಬೈ ಮೇರಿ ಜಾನ್~
ಈ ಅಂಶ ಯಾವ ನಗರದಲ್ಲಿ ರಿಯಲ್ ಎಸ್ಟೇಟ್ ಸ್ಥಿತಿಗತಿ ಹೇಗಿದೆ ಎಂಬುದನ್ನು ಸ್ಪಷ್ಟಪಡಿಸುವಂತಹುದು. `ನಿಮಗೆ ಯಾವ ನಗರದಲ್ಲಿ ಮನೆ ಬೇಕಿದೆ?~ ಎಂಬ ಪ್ರಶ್ನೆಗೆ ಶೇ 34 ಮಂದಿಯ ಉತ್ತರ `ಮುಂಬೈ ಮೇರಿ ಜಾನ್~ ಎಂಬುದೇ ಆಗಿತ್ತು. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಮನೆ ಖರೀದಿಸಲಿಚ್ಛಿಸಿದವರು ಶೇ 18 ಮಂದಿ.

ನಂತರದ ಸ್ಥಾನ?... ಬೆಂಗಳೂರು? ನಿಮ್ಮ ಊಹೆ ತಪ್ಪು. ಶೇ 10 ಮಂದಿಗೆ ಪುಣೆ ಇಷ್ಟವಾಗಿದೆ. ಈ `ಇಷ್ಟ~ದ ಪಟ್ಟಿಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಶೇ 9 ಮಂದಿ ಕರ್ನಾಟಕ ರಾಜಧಾನಿಯಲ್ಲಿ ಮನೆ ಖರೀದಿಗೆ ಸಿದ್ಧ. ನಂತರದಲ್ಲಿ ಹೈದರಾಬಾದ್(ಶೇ 7), ಚೆನ್ನೈ (ಶೇ 6), ಅಹಮದಾಬಾದ್ (ಶೇ 4) ಮತ್ತು ಕೋಲ್ಕತ(ಶೇ 3) ಇವೆ. ಶೇ 9 ಮಂದಿ ಮಾತ್ರ ದೇಶದ ಈ ಯಾವುದೇ ಪ್ರಮುಖ ನಗರದಲ್ಲಾದರೂ ಅವರ ಇಷ್ಟದ ಮನೆ ಖರೀದಿಗೆ ಸಿಕ್ಕರೂ ಆದೀತು ಎಂದಿದ್ದರು.

ಇದೇ ಸಮೀಕ್ಷೆಯಲ್ಲಿ 2012ರಲ್ಲಿ ಮನೆ/ಫ್ಲಾಟ್ಗಳ ಬೆಲೆ ಎಷ್ಟು ಹೆಚ್ಚಲಿದೆ ಎಂದು ಊಹಿಸುವಿರಿ? ನಿಮಗೆ ಎಂಥ ಮನೆ(ಬಂಗಲೆ, ವಿಲ್ಲಾ, ಸರ್ವೀಸ್/ಸ್ಟುಡಿಯೊ ಅಪಾರ್ಟ್ಮೆಂಟ್ ಅಥವಾ ರೆಸಿಡೆನ್ಸಿಯಲ್ ಫ್ಲಾಟ್) ಬೇಕಿದೆ? 2012ರಲ್ಲಿ ಗೃಹಸಾಲದ ಬಡ್ಡಿದರ ಏರಲಿದೆಯೋ/ಇಳಿಯಲಿದೆಯೋ? ಮತ್ತಿತರ ಅಂಶಗಳ ಕುರಿತೂ ಜನರ ಅಭಿಪ್ರಾಯ ಕೋರಲಾಗಿದ್ದಿತು. (ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ವೀಕ್ಷಿಸಬಹುದು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.