ಹಿರಿಯ ನಾಗರಿಕರೂ ತಮ್ಮ ಅನುಕೂಲಕ್ಕೆ ತಕ್ಕಂತಿರುವ ಮನೆಯಲ್ಲಿ ವಾಸಿಸುವ ಮನಸ್ಸು ಮಾಡುತ್ತಿದ್ದಾರೆ. ಆರೋಗ್ಯ ಸಂಬಂಧಿ ಸೌಲಭ್ಯ, ಮನರಂಜನಾ ತಾಣ, ಹಸಿರು ತುಂಬಿದ ಜಾಗ, ಅಗತ್ಯ ರಕ್ಷಣಾ ಸಿಬ್ಬಂದಿ, ಓಡಾಡಲು ಸಮರ್ಪಕ ಜಾಗ, ಅಗತ್ಯ ಸಾಮಾನುಗಳನ್ನು ಮನೆಗೇ ತರಿಸಿಕೊಳ್ಳುವ ಸೌಲಭ್ಯ, ಹತ್ತಿರದಲ್ಲಿ ಪಾರ್ಕ್, ಮನೆಯಲ್ಲಿ ಅನುಕೂಲಕರ ಸ್ಥಳಾವಕಾಶ ಇರಬೇಕೆಂದು ಹಿರಿಯರು ಅಪೇಕ್ಷಿಸುತ್ತಿದ್ದಾರೆ. ಅನುಕೂಲದ ಜೊತೆಗೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.