ನೆದರ್ಲೆಂಡ್ಸ್‌: ಗುಂಡಿನ ದಾಳಿಗೆ ವ್ಯಕ್ತಿ ಬಲಿ

ಶುಕ್ರವಾರ, ಏಪ್ರಿಲ್ 26, 2019
32 °C
ಭಯೋತ್ಪಾದಕರ ದಾಳಿ ಶಂಕೆ

ನೆದರ್ಲೆಂಡ್ಸ್‌: ಗುಂಡಿನ ದಾಳಿಗೆ ವ್ಯಕ್ತಿ ಬಲಿ

Published:
Updated:
Prajavani

ದಿ ಹೇಗ್‌: ನೆದರ್ಲೆಂಡ್ಸ್‌ನ ಉಟ್ರೆಕ್ಟ್‌ ನಗರದಲ್ಲಿ ಬಂದೂಕುಧಾರಿಯೊಬ್ಬ ಸೋಮವಾರ ಟ್ರಾಮ್‌ ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ.

ದಾಳಿ ನಡೆಸಿದ ಬಳಿಕ ದಾಳಿಕೋರ ಪರಾರಿಯಾಗಿದ್ದಾನೆ.

ಗುಂಡಿನ ದಾಳಿ ನಡೆದ ಸ್ಥಳಕ್ಕೆ ವೈದ್ಯಕೀಯ ನೆರವಿಗಾಗಿ ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿದೆ. ಡಚ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರು ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

’ಇದು ಭಯೋತ್ಪಾದಕರ ಕೃತ್ಯವಾಗಿರುವ ಸಾಧ್ಯತೆ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

’ದಾಳಿ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದು ತನಿಖೆ ನಡೆಸುತ್ತಿದ್ದಾರೆ. ದಾಳಿಕೋರನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ‘ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !