ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ನಿರ್ಣಯ: ಬೆಂಬಲ ಇಲ್ಲ

Last Updated 26 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಪಾಕ್ ನಿರ್ಣಯ: ಬೆಂಬಲ ಇಲ್ಲ

ನವದೆಹಲಿ, ಫೆ. 26 (ಯುಎನ್‌ಐ)– ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಸಭೆಯಲ್ಲಿ ಕಾಶ್ಮೀರ ಕುರಿತು ಭಾರತದ ವಿರುದ್ಧ ಗೊತ್ತುವಳಿಯನ್ನು ಮಂಡಿಸಿರುವ ಪಾಕಿಸ್ತಾನ ಮತದಾನಕ್ಕೆ ಒತ್ತಾಯಿಸಿದರೆ, ಅದರಲ್ಲಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ಪಾಲ್ಗೊಳ್ಳದಿರುವ ಸಾಧ್ಯತೆ ಇದೆ. ಪಾಕಿಸ್ತಾನದ ಈ ತಂತ್ರ ಭಾರತವನ್ನು ಪೇಚಿಗೆ ಸಿಕ್ಕಿಸುವುದು ಮಾತ್ರವೇ ಆಗಿದೆ ಎಂಬುದು ವೀಕ್ಷಕರ ಅಭಿಪ್ರಾಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಪಾನ್, ಚೀನಾ ಹಾಗೂ ಇತರ ಬಹುತೇಕ ಸದಸ್ಯ ರಾಷ್ಟ್ರಗಳು ತಟಸ್ಥ ನಿಲುವು ತಳೆಯುವ ಸಾಧ್ಯತೆ ಹೆಚ್ಚಾಗಿದೆ. ಕಾಶ್ಮೀರ ಸಮಸ್ಯೆಗೆ ಶಿಮ್ಲಾ ಒಪ್ಪಂದದ ಅಡಿಯಲ್ಲಿ ಪರಿಹಾರ ಕಂಡು ಹಿಡಿಯದಂತೆ ಮಾಡಲು ಪಾಕಿಸ್ತಾನ ಈ ಗೊತ್ತುವಳಿಯನ್ನು ಮಂಡಿಸಿದೆ ಎಂದೇ ಈ ದೇಶಗಳು ಮತ್ತು ಪಾಶ್ಚಾತ್ಯ ದೇಶಗಳು ಭಾವಿಸಿವೆ.

ಎರಡನೇ ಸೌರವ್ಯೂಹ ಪತ್ತೆ

ನ್ಯೂಯಾರ್ಕ್, ಫೆ. 26 (ಎಪಿ)– ಆಕಾಶ ಗಂಗೆಯಲ್ಲಿರುವ ಬೇರೊಂದು ನಕ್ಷತ್ರದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಎರಡು ಗ್ರಹಗಳ ಅಸ್ತಿತ್ವವನ್ನು ಪೆನ್ಸಿಲ್ವೇನಿಯಾ ವಿ.ವಿ.ಯ ವಿಜ್ಞಾನಿ ಅಲೆಕ್ಸಾಂಡರ್ ಎಂಬವರು ದೃಢಪಡಿಸಿದ್ದಾರೆ.

ನಮ್ಮ ಸೌರವ್ಯೂಹವನ್ನು ಬಿಟ್ಟರೆ ಬೇರೊಂದು ನಕ್ಷತ್ರದ ಗ್ರಹಗಳು ಪತ್ತೆಯಾಗಿರುವುದು ಇದೇ ಪ್ರಥಮ. ಭೂಮಿಯಿಂದ 1300 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಪುಲ್ಸಾರ್ ನಕ್ಷತ್ರದ ಸುತ್ತ ಈ ಎರಡು ಗ್ರಹಗಳು ಪ್ರದಕ್ಷಿಣೆ ಹಾಕುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT