ಸಂವಿಧಾನ ರಚನೆಗೆ ಮುಂದಡಿ ಇಡುವುದಕ್ಕೂ ಮೊದಲು ನಮಗೆ ಕೆಲವು ಸ್ಪಷ್ಟತೆಗಳಿರಬೇಕು. ಇಲ್ಲಿಯವರೆಗೆ ನಮಗೆ ನಮ್ಮದೇ ಆದ ಭಾರತದ ಕಲ್ಪನೆಗಳಿದ್ದವು. ಈಗ ಈ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುವ ಹೊಸ್ತಿಲಲ್ಲಿದ್ದೇವೆ. ಮೊದಲು ನಮಗೆ ಈ ಕಲ್ಪನೆಗಳ ಬಗ್ಗೆ ಸ್ಪಷ್ಟತೆ ಇರಬೇಕು, ಇದನ್ನೇ ನಾವು ದೇಶದ ಜನರಿಗೆ ನೀಡಬೇಕು; ಮತ್ತು ಜಗತ್ತಿಗೆ ಕೂಡ. ನಮ್ಮ ಗುರಿ, ನಮ್ಮ ಆಶೋತ್ತರಗಳ ಈ ಸಂಕಲ್ಪವನ್ನು (ರೆಸಲ್ಯೂಷನ್) ನಾನು ನಿಮ್ಮ ಮುಂದಿಡುತ್ತಿದ್ದೇನೆ.